alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದ ಅಪ್ರಾಪ್ತೆ ಬಿಚ್ಚಿಟ್ಟಿದ್ದಾಳೆ ಬೆಚ್ಚಿಬೀಳಿಸುವ ಸತ್ಯ

ಪಶ್ಚಿಮ ಬಂಗಾಳದ 16 ವರ್ಷದ ಹುಡುಗಿಯೊಬ್ಬಳಿಗೆ ಮದುವೆ ಆಸೆ ತೋರಿಸಿ ವೇಶ್ಯಾವಾಟಿಕೆಗೆ ತಳ್ಳಿದ ಪ್ರಕರಣ ಬೆಳಕಿಗೆ ಬಂದಿದೆ. ಹುಡುಗಿಯ ಗರ್ಭಿಣಿ ಸಹೋದರಿ ಈ ಕೂಪದಿಂದ ಹುಡುಗಿ ಹೊರ ಬರಲು ನೆರವಾಗಿದ್ದಾಳೆ.

ಪಶ್ಚಿಮ ಬಂಗಾಳದಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬ 16 ವರ್ಷದ ಹುಡುಗಿ ಸ್ನೇಹ ಬೆಳೆಸಿದ್ದ. ಆಕೆ ತಾಯಿ ಫೋನ್ ಗೆ ಕರೆ ಮಾಡಿ ಗಂಟೆಗಟ್ಟಲೆ ಮಾತನಾಡ್ತಿದ್ದ. ಇದ್ರಿಂದ ಆಕರ್ಷಿತಳಾದ ಹುಡುಗಿ ಆತನ ಜೊತೆ ಓಡಿ ಬಂದಿದ್ದಾಳೆ. ಮದುವೆ ಆಸೆ ತೋರಿಸಿ ಹುಡುಗಿಯನ್ನು ದೆಹಲಿಗೆ ಕರೆ ತಂದ ವ್ಯಕ್ತಿ ಆಕೆಯನ್ನು ವೇಶ್ಯಾವಾಟಿಕೆ ದಲ್ಲಾಳಿಯೊಬ್ಬನಿಗೆ ಮಾರಿದ್ದಾನೆ.

ಹುಡುಗಿಯನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಮೊದಲ ದಿನವೇ ನಶೆಯ ಇಂಜೆಕ್ಷನ್ ನೀಡಲಾಗಿದೆ. ನಂತ್ರ ಗ್ರಾಹಕರ ಕೈಗೆ ಹುಡುಗಿ ನೀಡಲಾಗಿದೆ. ದಿನದಲ್ಲಿ ಎರಡು ಬಾರಿ ಮಾತ್ರ ಆಹಾರ ನೀಡಲಾಗುತ್ತಿತ್ತಂತೆ. ಯಾವ ಗ್ರಾಹಕರೂ ಹುಡುಗಿಯ ಜೊತೆ ಬರದೆ ಹೋದಲ್ಲಿ ಆಕೆ ಪೂರ್ತಿ ದಿನ ಉಪವಾಸವಿರಬೇಕಾಗಿತ್ತಂತೆ.

ಬೆಳಿಗ್ಗೆ 10 ಗಂಟೆಗೆ ಗ್ರಾಹಕರನ್ನು ಆಕರ್ಷಿಸಲು ರೆಡಿಯಾಗಬೇಕಿತ್ತಂತೆ. 11 ಗಂಟೆ ವೇಳೆಗೆ ಗ್ರಾಹಕರು ಬರಲು ಶುರುಮಾಡುತ್ತಿದ್ದರಂತೆ. ಸ್ವಲ್ಪ ಸಮಯ ವಿಶ್ರಾಂತಿ ಇರುತ್ತಿತ್ತಂತೆ. ನಂತ್ರ ಸಂಜೆ 8 ಗಂಟೆಗೆ ಎರಡನೇ ಶಿಫ್ಟ್ ಶುರುವಾಗುತ್ತಿತ್ತಂತೆ. ಬೆಳಗಿನ ಜಾವ 4.30ರವರೆಗೂ ಕೆಲಸ ಮಾಡಬೇಕಿತ್ತಂತೆ. ಗ್ರಾಹಕರು ಸಿಕ್ಕಿಲ್ಲವೆಂದ್ರೆ ಉಪವಾಸ ಇರಬೇಕಿತ್ತಂತೆ. ಪ್ರತಿದಿನ ಸುಮಾರು 20 ಗ್ರಾಹಕರು ನನ್ನ  ಜೊತೆ ಮಲಗುತ್ತಿದ್ದರು ಎಂದು ಪೀಡಿತೆ ಹೇಳಿದ್ದಾಳೆ.

ಒಂದು ದಿನ ಗ್ರಾಹಕನೊಬ್ಬನ ಫೋನ್ ಪಡೆದು ಗೊತ್ತಿಲ್ಲದೆ ಕುಟುಂಬಸ್ಥರಿಗೆ ಕರೆ ಮಾಡಿದ್ದಾಳೆ ಹುಡುಗಿ. ದಂಗಾದ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಹುಡುಗಿ ಹುಡುಕಲು ವಿಫಲರಾಗಿದ್ದರಂತೆ.

ನಂತ್ರ ಹುಡುಗಿ ಸಹೋದರಿ ಗರ್ಭಿಣಿ ಗ್ರಾಹಕನ ನಂಬರ್ ಗೆ ಫೋನ್ ಮಾಡಿ ಆತನನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾಳೆ. ಅದು ಇದು ಮಾತನಾಡಿ ಆತನ ಗುರುತು ಹಾಗೂ ಎಲ್ಲ ಮಾಹಿತಿ ಪಡೆದಿದ್ದಾಳೆ. ಇದನ್ನು ಪೊಲೀಸರಿಗೆ ನೀಡಿದ್ದಾರೆ. ತಕ್ಷಣ ಆತನನ್ನು ಬಂಧಿಸಿದ ಪೊಲೀಸರು ವೇಶ್ಯಾಗೃಹದ ಮಾಹಿತಿ ಪಡೆದಿದ್ದಾರೆ.

ಗ್ರಾಹಕನಿಂದ ಮಾಹಿತಿ ಪಡೆದು ವೇಶ್ಯಾವಾಟಿಕೆ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಹುಡುಗಿ ಸಿಗಲಿಲ್ಲ. ಹಾಗಾಗಿ ದೆಹಲಿಯ 125 ವೈಶ್ಯಾಗೃಹದ ಮಾಲೀಕರಿಗೆ ಸಮನ್ಸ್ ಜಾರಿ ಮಾಡಿ ಎಲ್ಲ ವೇಶ್ಯೆಯರನ್ನು ಪೊಲೀಸರ ಮುಂದೆ ನಿಲ್ಲಿಸುವಂತೆ ಆದೇಶ ನೀಡಲಾಗಿತ್ತು. ಈ ವೇಳೆ ಹುಡುಗಿ ಕರೆ ತಂದ ದಲ್ಲಾಳಿ ಹುಡುಗಿಯನ್ನು ಬಚಾವ್ ಮಾಡಲು ಮುಂದಾಗಿದ್ದಾನೆ. ಆಕೆಯ ಕೈಗೆ 3 ಸಾವಿರ ರೂಪಾಯಿ ನೀಡಿ ಪೊಲೀಸ್ ಠಾಣೆಗೆ ಕಳುಹಿಸಿದ್ದಾನೆ. ಎಲ್ಲ ದೂರು ವಾಪಸ್ ಪಡೆಯುವ ಜೊತೆಗೆ ಗಲಾಟೆ ತಣ್ಣಗಾದ ಮೇಲೆ ಮತ್ತೆ ಬಾ ಎಂದಿದ್ದಾನಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...