alex Certify
ಕನ್ನಡ ದುನಿಯಾ       Mobile App
       

Kannada Duniya

ಯಾರ ಮಗುವಿಗೆ ತಾಯಿಯಾಗ್ತಿದ್ದಳು ಪ್ರತ್ಯುಷಾ.? ಈ ಬಗ್ಗೆ ರಾಹುಲ್ ಹೇಳಿದ್ದೇನು..?

file-photo

ಪ್ರತ್ಯುಷಾ ಬ್ಯಾನರ್ಜಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆಕೆ ಗರ್ಭಿಣಿಯಾಗಿದ್ದಳು, ಆತ್ಮಹತ್ಯೆಗಿಂತ ಒಂದು ದಿನ ಮೊದಲು ಗರ್ಭಪಾತ ಮಾಡಿಸಿಕೊಂಡಿದ್ದಳು ಎಂದು ಜೆಜೆ ಆಸ್ಪತ್ರೆ ವೈದ್ಯರು ವರದಿ ನೀಡಿದ್ದರು. ಪ್ರತ್ಯುಷಾ ಗರ್ಭಿಣಿಯಾಗಿದ್ದಳು ಎಂಬುದನ್ನು ಆಕೆ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ. ಈಗ ಈ ಬಗ್ಗೆ ಇನ್ನೊಂದು ಮಹತ್ವದ ವಿಷಯವನ್ನು ಹೊರಹಾಕಿದ್ದಾನೆ.

ಪ್ರತ್ಯುಷಾ ಯಾರ ಮಗುವಿಗೆ ತಾಯಿಯಾಗುವವಳಿದ್ದಳು ಎಂಬುದನ್ನು ರಾಹುಲ್ ಹೇಳಿದ್ದಾನೆ. ಪ್ರತ್ಯುಷಾ ಹೊಟ್ಟೆಯಲ್ಲಿ ನನ್ನ ಕುಡಿ ಬೆಳೆಯುತ್ತಿತ್ತು. ಆದ್ರೆ ನಮಗೆ ಇನ್ನೂ ಮದುವೆಯಾಗದ ಕಾರಣ ಇಬ್ಬರೂ ಗರ್ಭಪಾತ ಮಾಡಿಸುವ ನಿರ್ಧಾರ ತೆಗೆದುಕೊಂಡಿದ್ದೆವು. ನವೆಂಬರ್ ನಲ್ಲಿ ನಾವಿಬ್ಬರು ಮದುವೆಯಾಗಲಿದ್ದೆವು ಎಂದಿದ್ದಾನೆ ರಾಹುಲ್.

ಇತ್ತ ಪ್ರತ್ಯುಷಾ ತಾಯಿ ಕೋರ್ಟ್ ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಪ್ರತ್ಯುಷಾದು ಆತ್ಮಹತ್ಯೆಯಲ್ಲ, ಕೊಲೆ. ಈ ಬಗ್ಗೆ ನಾವು ಪೊಲೀಸರಿಗೆ ತಿಳಿಸಿದ್ದೆವು. ಆದ್ರೂ ಪೊಲೀಸರು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದ್ರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...