alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಷಯವನ್ನು ಒಪ್ಪಿಕೊಂಡ ಪ್ರತ್ಯುಷಾ ಬಾಯ್ ಫ್ರೆಂಡ್ ರಾಹುಲ್

rahulraj

‘ಬಾಲಿಕಾ ವಧು’ ಧಾರವಾಹಿಯ ಪ್ರಸಿದ್ಧ ನಟಿ ಪ್ರತ್ಯುಷಾ ಗರ್ಭಿಣಿಯಾಗಿದ್ದಳು ಎಂಬ ವಿಷಯವನ್ನು ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಒಪ್ಪಿಕೊಂಡಿದ್ದಾನೆ. ಆದ್ರೆ ಆತ್ಮಹತ್ಯೆ ಹಿಂದಿನ ದಿನ ಪ್ರತ್ಯುಷಾ ಅಬಾರ್ಶನ್ ಮಾಡಿಸಿಕೊಂಡಿಲ್ಲ. ಅನೇಕ ದಿನಗಳ ಹಿಂದೆಯೇ ಪ್ರತ್ಯುಷಾ ಅಬಾರ್ಶನ್ ಮಾಡಿಸಿಕೊಂಡಿದ್ದಳು ಎಂದಿದ್ದಾನೆ ರಾಹುಲ್.

ಪೊಲೀಸ್ ವಿಚಾರಣೆ ವೇಳೆ ರಾಹುಲ್ ಅಬಾರ್ಶನ್ ಆಗಿರುವುದನ್ನು ಒಪ್ಪಿಕೊಂಡಿದ್ದಾನೆ. ಆದ್ರೆ ಆತ್ಮಹತ್ಯೆ ಮಾಡಿಕೊಂಡ ಹಿಂದಿನ ದಿನ ಅಬಾರ್ಶನ್ ಆಗಿಲ್ಲ ಎಂದಿದ್ದಾನೆ. ಜೆಜೆ ಆಸ್ಪತ್ರೆ ವೈದ್ಯರು ಪ್ರತ್ಯುಷಾ ಗರ್ಭಿಣಿಯಾಗಿದ್ದಳು. ಆಕೆಗೆ ಮೂರು ತಿಂಗಳಾಗಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ಆಕೆಗೆ ಗರ್ಭಪಾತವಾಗಿದೆ. ಇದರ ಗುರುತಿದೆ ಎಂದು ವರದಿ ನೀಡಿದ್ದರು.

ರಾಹುಲ್ ವಿರುದ್ಧ ಕೇಸ್ ದಾಖಲಾಗಿದೆ. ಏಪ್ರಿಲ್ 24ರವರೆಗೆ ಬಂಧನಕ್ಕೆ ತಡೆ ನೀಡಲಾಗಿದೆ. ತನಿಖೆ ವೇಳೆ ಪೊಲೀಸರು ಈ ಬಗ್ಗೆ ರಾಹುಲ್ ಕೇಳಿದ್ದಾರೆ. ಆಗ ಗರ್ಭಪಾತವಾಗಿರುವುದನ್ನು ರಾಹುಲ್ ಒಪ್ಪಿಕೊಂಡಿದ್ದಾನೆ.

ಪೊಲೀಸ್ : ನಿನ್ನ ಜೊತೆ ಇರುವ ವೇಳೆ ಆಕೆ ಯಾವಾಗ ಗರ್ಭಿಣಿಯಾಗಿದ್ದಳು?

ರಾಹುಲ್ : ಜನವರಿಯಲ್ಲಿ.

ಪೊಲೀಸ್ : ಜನವರಿಯಲ್ಲಿ ಯಾವಾಗ?

ರಾಹುಲ್ : ದಿನಾಂಕ ನೆನಪಿಲ್ಲ. ಜನವರಿಯ ಮೊದಲ ವಾರದಲ್ಲಿರಬೇಕು.

ಪೊಲೀಸ್ : ಪ್ರತ್ಯುಷಾ ಗರ್ಭಪಾತ ಯಾವಾಗ ಮಾಡಿಸಿಕೊಂಡಿದ್ದಳು?

ರಾಹುಲ್ : ಮಾರ್ಚ್ ಮೊದಲ ಅಥವಾ ಎರಡನೇ ವಾರ.

ಪೊಲೀಸ್ : ಗರ್ಭಪಾತದ ವೇಳೆ ವೈದ್ಯರ ಸಲಹೆ ಪಡೆದಿದ್ದಳಾ?

ರಾಹುಲ್ : ಪ್ರತ್ಯುಷಾ, ಗೈನೋಕಾಲಜಿಸ್ಟ್ ಸಲಹೆ ಪಡೆದಿದ್ದಳು.

ಪೊಲೀಸ್ : ಗರ್ಭಪಾತದ ವೇಳೆ ನೀನು ಆಸ್ಪತ್ರೆಯಲ್ಲಿ ಪ್ರತ್ಯುಷಾ ಜೊತೆಗಿದ್ದೆಯಾ?

ರಾಹುಲ್ : ಇಲ್ಲ, ಆಕೆ ಒಬ್ಬಳೆ ಹೋಗಿದ್ದಳು. ನಾನು ಬ್ಯುಸಿ ಇದ್ದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...