alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರದ್ಯುಮನ್ ಕೊಲೆ ಪ್ರಕರಣ : ಸ್ಕೂಲಿನಲ್ಲಿ ಅಶ್ಲೀಲ ಚಿತ್ರ ನೋಡ್ತಿದ್ದನಂತೆ ಆರೋಪಿ

ಗುರ್ಗಾಂವ್ ನ ರಯಾನ್ ಇಂಟರ್ ನ್ಯಾಷನಲ್ ಸ್ಕೂಲಿನಲ್ಲಿ ನಡೆದ 7 ವರ್ಷದ ಬಾಲಕ ಪ್ರದ್ಯುಮನ್ ಠಾಕೂರ್ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗ್ತಿದೆ. ಸಿಬಿಐ ಪೊಲೀಸರು ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ. ಬಂಧಿಯಾಗಿರುವ ಪ್ರದ್ಯುಮನ್ ಕೊಲೆ ಆರೋಪಿ 11ನೇ ತರಗತಿ ವಿದ್ಯಾರ್ಥಿ ಬಗ್ಗೆ ಆತಂಕಕಾರಿ ವಿಷ್ಯ ಹೊರಬಿದ್ದಿದೆ.

ಆರೋಪಿ  11ನೇ ತರಗತಿ ವಿದ್ಯಾರ್ಥಿ ಪೋರ್ನ್ ಚಿತ್ರಗಳ ದಾಸನಾಗಿದ್ದ ಎನ್ನಲಾಗಿದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಆತನಿಗೆ ಒಂದು ವರ್ಷದಿಂದ ಚಿಕಿತ್ಸೆ ನಡೆಯುತ್ತಿತ್ತು. ಆತ ತುಂಬಾ ಹಠಮಾರಿ ಹಾಗೂ ದುಷ್ಟ ವಿದ್ಯಾರ್ಥಿಯಾಗಿದ್ದ ಎಂದು ಆತನ ಸಹಪಾಠಿಗಳು ತಿಳಿಸಿದ್ದಾರೆ. ಸಣ್ಣ ಸಣ್ಣ ವಿಚಾರಕ್ಕೆ ಗಲಾಟೆ ಮಾಡ್ತಿದ್ದ ಆತ ಬ್ಯಾಗ್ ನಲ್ಲಿ ಚಾಕು ತರ್ತಿದ್ದನಂತೆ. ಸ್ಕೂಲಿನಲ್ಲಿಯೇ ಪೋರ್ನ್ ಚಿತ್ರಗಳನ್ನು ವೀಕ್ಷಣೆ ಮಾಡ್ತಿದ್ದ ಎನ್ನಲಾಗಿದೆ.

ಸಿಸಿ ಟಿವಿಯಲ್ಲಿ ವಿದ್ಯಾರ್ಥಿ ಹತ್ಯೆ ಮಾಡಿದ್ದಾನೆಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ. ಜೊತೆಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಕರಣದ ವಿಚಾರಣೆ ನಡೆಸಿರುವ ಜುವೆನಿಲ್ ಜಸ್ಟಿಸ್ ಬೋರ್ಡ್ ವಿದ್ಯಾರ್ಥಿಯನ್ನು 3 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ. ಆದ್ರೆ ಸಿಬಿಐ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ಮಾತ್ರ ವಿದ್ಯಾರ್ಥಿ ವಿಚಾರಣೆ ಮಾಡಬೇಕೆಂದು ಸೂಚನೆ ನೀಡಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...