alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರದ್ಯುಮನ್ ಕೊಲೆ ಪ್ರಕರಣ : ಚಾಕು ಮಾರಾಟಗಾರ ಹೇಳಿದ್ದೇನು?

ಪ್ರದ್ಯುಮನ್ ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಸೋಹಾನ್ ಮಾರುಕಟ್ಟೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಆರೋಪಿ 11ನೇ ತರಗತಿ ವಿದ್ಯಾರ್ಥಿ ಚಾಕು ಖರೀದಿ ಮಾಡಿದ ಅಂಗಡಿಗೆ ತೆರಳಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ವಿದ್ಯಾರ್ಥಿ ಫೋಟೋ ತೋರಿಸಿ ಆತನ ಬಗ್ಗೆ ಹಾಗೂ ಆತ ಖರೀದಿಸಿದ ಚಾಕು ಬಗ್ಗೆ ಮಾಹಿತಿ ಪಡೆದಿದ್ದಾರೆ.

ಅಂಗಡಿ ಮಾಲೀಕ, ಚಾಕು ಫೋಟೋ ತೋರಿಸಿದ ತಕ್ಷಣ ಗುರುತು ಹಿಡಿದಿದ್ದಾನೆ. ಆದ್ರೆ ವಿದ್ಯಾರ್ಥಿ ಗುರುತು ಹಿಡಿಯಲು ವಿಫಲನಾಗಿದ್ದಾನೆ. ಈ ಚಾಕು ನಮ್ಮ ಅಂಗಡಿಯಲ್ಲಿ ಮಾತ್ರ ಸಿಗುತ್ತೆ ಎಂದು ಅಂಗಡಿ ಮಾಲೀಕ ಹೇಳಿದ್ದಾನೆ. ಎರಡು ತಿಂಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಈ ಚಾಕು ನೀಡಿದ್ದು ಸತ್ಯ. ಆದ್ರೆ ವ್ಯಕ್ತಿ ಗುರುತು ಹಿಡಿಯುವುದು ಕಷ್ಟ ಎಂದಿದ್ದಾನೆ ಮಾಲೀಕ. ಅಂಗಡಿಯಲ್ಲಿದ್ದ ಇನ್ನೂ ಮೂರ್ನಾಲ್ಕು ಚಾಕುವನ್ನು ಸಿಬಿಐ ಅಧಿಕಾರಿಗಳು ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಶುಕ್ರವಾರ ರಯಾನ್ ಇಂಟರ್ನ್ಯಾಷನಲ್ ಸ್ಕೂಲ್ ಗೆ ಭೇಟಿ ನೀಡಿ ಮತ್ತೆ ಸಿಬಿಐ ಟೀಂ ಪರಿಶೀಲನೆ ನಡೆಸಿದೆ. 11ನೇ ತರಗತಿ ವಿದ್ಯಾರ್ಥಿ ಜೊತೆ ಇನ್ನೊಬ್ಬ ವಿದ್ಯಾರ್ಥಿ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಆತನ ಹುಡುಕಾಟ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...