alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರದ್ಯುಮನ್ ಹತ್ಯೆ ಹಿಂದೆ ಇನ್ನೊಬ್ಬ ವಿದ್ಯಾರ್ಥಿ…?

ಪ್ರದ್ಯುಮನ್ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಹತ್ಯೆಯಲ್ಲಿ ರಯಾನ್ ಇಂಟರ್ ನ್ಯಾಷನಲ್ ಸ್ಕೂಲಿನಲ್ಲಿ ಓದುತ್ತಿರುವ ಇನ್ನೊಬ್ಬ ವಿದ್ಯಾರ್ಥಿ ಹೆಸರು ತಳುಕು ಹಾಕಿಕೊಂಡಿದೆ. ಈ ವಿದ್ಯಾರ್ಥಿ ಕೂಡ ಸೋಹನಾ ನಿವಾಸಿ ಎಂದು ಮೂಲಗಳು ಹೇಳಿವೆ.

ಗುರುವಾರ ಸೋಹಾನ್ ಗೆ ತೆರಳಿದ್ದ ಸಿಬಿಐ ಅಧಿಕಾರಿಗಳು ವಿದ್ಯಾರ್ಥಿ ಮನೆ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಕ್ಷಣದಲ್ಲಾದ್ರೂ ವಿದ್ಯಾರ್ಥಿಯನ್ನು ಸಿಬಿಐ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಈಗಾಗಲೇ ಬಂಧಿತನಾಗಿರುವ ಆರೋಪಿ 11ನೇ ತರಗತಿ ವಿದ್ಯಾರ್ಥಿ ಕೂಡ ಸೋಹಾನ್ ನಿವಾಸಿ. ತಂದೆ ಜೊತೆ ಈತನನ್ನು ನಾಲ್ಕೈದು ಬಾರಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.

ಪ್ರದ್ಯುಮನ್ ಬಸ್ ಕಂಡಕ್ಟರ್ ಹೇಳಿಕೆ ಮೇಲೆಯೂ ವಿಚಾರಣೆ ನಡೆಯುತ್ತಿದೆ. ಪ್ರದ್ಯುಮನ್ ಹತ್ಯೆಗೂ ಮುನ್ನ ಶೌಚಾಲಯದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ನೋಡಿದ್ದೆ. ಅವರು ಬಟ್ಟೆ ಬದಲಿಸುತ್ತಿದ್ದರು ಎಂದು ಕಂಡಕ್ಟರ್ ಹೇಳಿದ್ದ. 11ನೇ ತರಗತಿ ಆರೋಪಿ ಕೂಡ ಇನ್ನೊಬ್ಬ ವಿದ್ಯಾರ್ಥಿ ಹೆಸರು ಹೇಳಿದ್ದಾನೆ ಎನ್ನಲಾಗಿದೆ.

ಗುರುವಾರ ಸಿಬಿಐ ತಂಡ ಆರೋಪಿ ವಿದ್ಯಾರ್ಥಿಯನ್ನು ಸ್ಕೂಲಿಗೆ ಕರೆತಂದು ಮತ್ತೊಮ್ಮೆ ವಿಚಾರಣೆ ನಡೆಸಿದೆ. ಎಲ್ಲೆಲ್ಲಿ ಏನೇನು ಮಾಡಿದ್ದಾನೆಂಬ ವಿವರ ಪಡೆದಿದೆ. ವಿದ್ಯಾರ್ಥಿಯನ್ನು ರಕ್ಷಿಸಲು ಶಾಲಾ ಆಡಳಿತ ಮಂಡಳಿಯ ಕೆಲ ಅಧಿಕಾರಿಗಳು ಕೈಜೋಡಿಸಿರುವ ಶಂಕೆ ವ್ಯಕ್ತವಾಗಿದ್ದು, ಶೀಘ್ರದಲ್ಲಿಯೇ ಎಲ್ಲವೂ ಹೊರಬರಲಿದೆ ಎಂದು ಸಿಬಿಐ ಹೇಳಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...