alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಿಗೆ ಬಂತು ನಕಲಿ ಪೊಲೀಸ್ ಕಾಮಪುರಾಣ

poli crim kl456

ಮಹಿಳೆಯೊಬ್ಬರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ಪೊಲೀಸ್ ಇನ್ಸ್ ಪೆಕ್ಟರ್ ಹೆಸರಿನಲ್ಲಿ ಮಂಚಕ್ಕೆ ಕರೆದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಶಾಲೆಯೊಂದರಲ್ಲಿ ಶಿಕ್ಷಕನಾಗಿರುವ ಪುರುಷೋತ್ತಮ್ ಹೀಗೆ ಮಾಡಿದ ಮಹಾನುಭಾವ.

ತುಮಕೂರು ಜಿಲ್ಲೆಯ ಮಹಿಳೆಯೊಬ್ಬರು ಲೋನ್ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ 2 ಲಕ್ಷ ಹಣವನ್ನು ಶಿವಮೊಗ್ಗದ ಖಾಸಗಿ ಹೋಟೆಲ್ ಒಂದರಲ್ಲಿ ಕೊಟ್ಟಿದ್ದು, ಆಗ ಹಣ ಪಡೆದುಕೊಂಡವರು ಪರಾರಿಯಾಗಿದ್ದರಿಂದ ದೊಡ್ಡಪೇಟೆ ಠಾಣೆ ಪೊಲೀಸರಿಗೆ ದೂರು ಕೊಡಲು ಹೋಗಿದ್ದಾರೆ. ಠಾಣೆಯಲ್ಲೇ ಇದ್ದ ಪುರುಷೋತ್ತಮ ಏನಾಗಬೇಕೆಂದು ಮಹಿಳೆಯನ್ನು ವಿಚಾರಿಸಿದ್ದಾನೆ. ತಾನು ಹಣ ಕೊಡಿಸುತ್ತೇನೆ ನಿಮ್ಮ ಮೊಬೈಲ್ ನಂಬರ್ ಕೊಡಿ ಎಂದು ಪಡೆದುಕೊಂಡಿದ್ದು, ಬಳಿಕೆ ಮಹಿಳೆಗೆ ಕರೆ ಮಾಡಿ ನನ್ನ ಆಸೆ ತೀರಿಸಬೇಕೆಂದು ಒತ್ತಡ ಹೇರಿದ್ದಾನೆ ಎನ್ನಲಾಗಿದೆ.

ಇದರಿಂದ ಗಾಬರಿಯಾದ ಮಹಿಳೆ ಪತಿ ಹಾಗೂ ಸಂಬಂಧಿಕರಿಗೆ ವಿಷಯ ತಿಳಿಸಿದ್ದು, ಅದರಂತೆ ಪ್ಲಾನ್ ಮಾಡಿ ಬೆಂಗಳೂರಿನ ಹೋಟೆಲ್ ಒಂದಕ್ಕೆ ಅವನನ್ನು ಕರೆಸಿದ್ದಾರೆ. ಅಲ್ಲಿ ತಾನು ಪೊಲೀಸ್ ಇನ್ಸ್ ಪೆಕ್ಟರ್ ಅಲ್ಲ, ಶಿಕ್ಷಕ ಎಂದು ಪುರುಷೋತ್ತಮ್ ಹೇಳಿಕೊಂಡಿದ್ದು, ಅಲ್ಲಿಂದ ಪರಾರಿಯಾಗಿದ್ದಾನೆ. ಹಣ ಕಳೆದುಕೊಂಡ ಮಹಿಳೆ ಈಗ ನಕಲಿ ಪೊಲೀಸ್ ಕಿರುಕುಳಕ್ಕೆ ಒಳಗಾಗಿ, ತುಮಕೂರು ಪೊಲೀಸರ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...