alex Certify
ಕನ್ನಡ ದುನಿಯಾ       Mobile App
       

Kannada Duniya

ನಾಚಿಕೆಗೇಡು….ಆರೋಪಿಯ ಪತ್ನಿಯನ್ನು ಜೀಪ್ ಮೇಲೆ ಕಟ್ಟಿ ಊರು ಸುತ್ತಿಸಿದ ಪೊಲೀಸ್

ಅಪರಾಧಿಗಳನ್ನು ಬಂಧಿಸಲು ಪೊಲೀಸರು ತಮ್ಮದೆ ವಿಧಾನಗಳನ್ನು ಅನುಸರಿಸ್ತಾರೆ. ಹಲವು ಬಾರಿ ಅವ್ರ ಅಸ್ತ್ರ ಯಶಸ್ವಿಯಾದ್ರೆ ಮತ್ತೆ ಕೆಲವು ಬಾರಿ ಅವ್ರ ಕ್ರಮ ಜನಸಾಮಾನ್ಯರಲ್ಲಿ ಭಯ ಹುಟ್ಟಿಸುತ್ತದೆ. ಪಂಜಾಬಿನ ಮಜಿಠಾದಲ್ಲಿ ನಡೆದ ಘಟನೆಯೊಂದು ಜನಸಾಮಾನ್ಯರಲ್ಲಿ ಅನೇಕ ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ.

ಪೊಲೀಸರ ನಾಚಿಕೆಗೇಡಿ ಕೆಲಸ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿ ಬಂಧನಕ್ಕೆ ಆತನ ಪತ್ನಿಯ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಜೀಪ್ ಮೇಲೆ ಮಹಿಳೆಯನ್ನು ಕಟ್ಟಿಹಾಕಿ ಇಡೀ ಊರು ಸುತ್ತಿಸಿದ್ದಾರೆ. ಮಹಿಳೆ ಜೀಪಿನಿಂದ ಕೆಳಗೆ ಬಿದ್ದಿದ್ದಾಳೆ. ಆಕೆಗೆ ಗಾಯವಾಗಿದೆ. ಘಟನೆ ನಂತ್ರ ಮಹಿಳೆಯನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಪೀಡಿತ ಮಹಿಳೆ ಪತಿ ಬಂಧನಕ್ಕೆ ಪೊಲೀಸರು ಮುಂದಾಗಿದ್ದರಂತೆ. ಕಾರಣವಿಲ್ಲದೆ ಪತಿ ಬಂಧನಕ್ಕೆ ಮುಂದಾಗಿದ್ದ ಪೊಲೀಸ್ ಕ್ರಮವನ್ನು ಮಹಿಳೆ ವಿರೋಧಿಸಿದ್ದಾಳೆ. ಇದ್ರಿಂದ ಕೋಪಗೊಂಡ ಪೊಲೀಸರು ಮಹಿಳೆಗೆ ಬೈದು, ಜೀಪಿನ ಮೇಲೆ ಕಟ್ಟಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಪೊಲೀಸ್ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...