alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಪೇದೆ ಜೊತೆ ಇನ್ಸ್ಪೆಕ್ಟರ್ ರಾಸಲೀಲೆ: ವಿಡಿಯೋ ಮಾಡಿದ ಪತಿ

ಮತ್ತೊಮ್ಮೆ ಉತ್ತರ ಪ್ರದೇಶದ ಖಾಕಿ ಬಣ್ಣ ಬಯಲಾಗಿದೆ. ಪೊಲೀಸರು ಮುಜುಗರಕ್ಕೊಳಗಾಗುವ ಘಟನೆ ನಡೆದಿದೆ. ಹರ್ಮೀಪುರ ಜಿಲ್ಲೆಯಲ್ಲಿ ಇನ್ಸ್ಪೆಕ್ಟರ್ ಒಬ್ಬ ತನ್ನದೆ ಇಲಾಖೆಯ ಮಹಿಳಾ ಸಿಬ್ಬಂದಿಯೊಂದಿಗೆ ಮಲಗಿದ್ದಾಗ ಸಿಕ್ಕಿಬಿದ್ದಿದ್ದಾನೆ. ಇವ್ರ ಬಣ್ಣ ಬಯಲು ಮಾಡಿದ್ದು ಮತ್ಯಾರೂ ಅಲ್ಲ. ಮಹಿಳೆಯ ಪತಿ. ಸಿಕ್ಕಿಬಿದ್ದ ಇನ್ಸ್ಪೆಕ್ಟರ್ ವಿರುದ್ಧ ತನಿಖೆ ನಡೆಯುತ್ತಿದೆ.

ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಜೊತೆ ಪೊಲೀಸ್ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂಬುದು ಪತಿಗೆ ಅನುಮಾನ ಬಂದಿದೆ. ಪತ್ನಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಶುರುಮಾಡಿದ್ದಾನೆ. ಪತ್ನಿ ಮೇಲೆ ಒತ್ತಡ ಹೇರಿ ಇನ್ಸ್ಪೆಕ್ಟರ್ ಅಕ್ರಮ ಸಂಬಂಧ ಬೆಳೆಸಿದ್ದಾನೆಂಬ ವಿಷ್ಯ ಪತಿಗೆ ತಿಳಿದಿದೆ.

ಸೆಪ್ಟೆಂಬರ್ 18ರಂದು ಪತಿಗೆ ತಿಳಿಸದೆ ಆಕೆ ಠಾಣೆಗೆ ಹೋಗಿದ್ದಾರಂತೆ. ಪತ್ನಿ ಸುನೀಲ್ ಚೇಂಬರ್ ಗೆ ಹೋಗೋದನ್ನು ನೋಡಿದ್ದಾರೆ. ನಂತ್ರ ವಿಡಿಯೋ ಮಾಡಿ ಹಿರಿಯ ಪೊಲೀಸರಿಗೆ ವರದಿ ಮಾಡಿದ್ದಾರೆ ಎನ್ನಲಾಗಿದೆ. ತಕ್ಷಣ ಪೊಲೀಸರು ಸುನೀಲ್ ಚೇಂಬರ್ ಮೇಲೆ ದಾಳಿ ನಡೆಸಿದ್ದಾರೆ. ಆಗ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ಇನ್ಸ್ಪೆಕ್ಟರ್ ಸುನೀಲ್ ಪ್ರಕರಣ ಮುಚ್ಚಿಹಾಕುವ ಯತ್ನ ಮಾಡಿದ್ದಾನೆ. ಆದ್ರೆ ಸುನೀಲ್ ವಿರುದ್ಧ ದೂರು ದಾಖಲಿಸಿರುವ ಮಹಿಳೆ ಪತಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...