alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿ ಪಾಲಕರನ್ನು ಕೂಡಿ ಹಾಕಿ ಸಬ್ ಇನ್ಸ್ ಪೆಕ್ಟರ್ ಮಾಡ್ತಿದ್ದ ಹೇಸಿಗೆ ಕೆಲಸ

ಮಧ್ಯಪ್ರದೇಶದ ರೇವಾ ಜಿಲ್ಲೆಯ ಮೌಂಗಂಜ್ ನಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆ. ರಕ್ಷಣೆ ನೀಡಬೇಕಾದವನೇ ಭಕ್ಷಕನಾಗಿದ್ದಾನೆ. ಸಬ್ ಇನ್ಸ್ ಪೆಕ್ಟರ್ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದೆ.

ಮೌಂಗಂಜ್ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್  ಮಹೇಂದ್ರ ಮಿಶ್ರಾ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಮಹೇಂದ್ರ ಮಿಶ್ರಾ 15 ವರ್ಷದ ಬಾಲಕಿಗೆ ಮದುವೆ ಆಸೆ ತೋರಿಸಿ ಅತ್ಯಾಚಾರವೆಸಗಿದ್ದಾನಂತೆ. 45 ವರ್ಷದ ಮಿಶ್ರಾ ಹುಡುಗಿ ಮನೆಯಲ್ಲಿಯೇ ಅತ್ಯಾಚಾರವೆಸಗುತ್ತಿದ್ದನಂತೆ. ಈ ವೇಳೆ ಹುಡುಗಿ ಪಾಲಕರನ್ನು ಬೇರೆ ಕೋಣೆಯಲ್ಲಿ ಕೂಡಿ ಹಾಕುತ್ತಿದ್ದ ಎನ್ನಲಾಗಿದೆ.

ಜುಲೈ 27ರಂದು ಮದುವೆ ಆಸೆ ತೋರಿಸಿ ಮಿಶ್ರಾ ಲಾಡ್ಜ್ ಗೂ ಹುಡುಗಿಯನ್ನು ಕರೆದುಕೊಂಡು ಹೋಗಿದ್ದನಂತೆ. ಪೀಡಿತೆ ಪೊಲೀಸರಿಗೆ ದೂರು ನೀಡಿದ್ದು, ಜುಲೈ 30ರ ರಾತ್ರಿ ಮಿಶ್ರಾನನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಮಿಶ್ರಾಗೆ ಹೆಂಡತಿ, ಮಕ್ಕಳಿದ್ದಾರೆ. ಪೀಡಿತ ಬಾಲಕಿ 9ನೇ ತರಗತಿಯಲ್ಲಿ ಓದುತ್ತಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...