alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಕತ್ತು ಹಿಸುಕಿದ್ರು ಹೆತ್ತ ತಾಯಿ-ತಂದೆ

ಘಾಜಿಯಾಬಾದ್ ನಲ್ಲಿ ಹಿಂದಿನ ವಾರ ನಡೆದ ಅಪ್ರಾಪ್ತೆ ಕೊಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಪ್ರಾಪ್ತೆ ಕೊಲೆಗೂ ಮುನ್ನ ಆಕೆ ಮೇಲೆ ಅತ್ಯಾಚಾರ ನಡೆದಿರಲಿಲ್ಲ. ಅಪ್ರಾಪ್ತೆ ಕುಟುಂಬಸ್ಥರೇ ಆಕೆಯನ್ನು ಕೊಲೆ ಮಾಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಅಪ್ರಾಪ್ತೆ ಕೊಲೆ ಪ್ರಕರಣದ ಆರೋಪದ ಮೇಲೆ ಬಾಲಕಿ ತಂದೆ, ಸಹೋದರ ಹಾಗೂ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಭೋಜ್ಪುರ ಠಾಣಾ ವ್ಯಾಪ್ತಿಯ ತೋಟವೊಂದರಲ್ಲಿ ಜನವರಿ 1ರಂದು 15 ವರ್ಷ ವಯಸ್ಸಿನ ಹುಡುಗಿಯ ಶವ ಸಿಕ್ಕಿತ್ತು. ಬಟ್ಟೆ ಅಸ್ತವ್ಯಸ್ತವಾದ ಸ್ಥಿತಿಯಲ್ಲಿ ಶವ ಸಿಕ್ಕಿತ್ತು. ಅತ್ಯಾಚಾವೆಸಗಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ದೂರು ನೀಡಿದ್ದರು. ಆದ್ರೆ ತಂದೆಯೇ ಕತ್ತು ಹಿಸುಕಿ ಮಗಳ ಕೊಲೆ ಮಾಡಿದ್ದಾನೆಂಬ ವಿಷ್ಯ ಬಹಿರಂಗವಾಗಿದೆ.

ಬಾಲಕಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆಕೆ ಆತನ ಜೊತೆ ಓಡಿ ಹೋಗುವ ಆತಂಕದಲ್ಲಿದ್ದ ಕುಟುಂಬಸ್ಥರು ಮಗಳನ್ನೇ ಕೊಲೆ ಮಾಡಿದ್ದಾರೆ. ನಂತ್ರ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಎಲ್ಲರನ್ನೂ ನಂಬಿಸುವ ಪ್ರಯತ್ನ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...