alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆ ಪಡೆದ ಕಾರುಗಳನ್ನು Olx ನಲ್ಲಿ ಮಾರುತ್ತಿದ್ದ ಭೂಪ

focus_on_fraud-58ಬಹುರಾಷ್ಟ್ರೀಯ ಕಂಪನಿಗಳ ಬಳಕೆಗೆ ಐಷಾರಾಮಿ ಕಾರುಗಳು ಬಾಡಿಗೆಗೆ ಬೇಕೆಂದು ಕಾರು ಮಾಲೀಕರನ್ನು ನಂಬಿಸುತ್ತಿದ್ದ ವಂಚಕನೊಬ್ಬ ಅವುಗಳನ್ನು ಪಡೆದು ಬಳಿಕ ಆನ್ ಲೈನ್ ಜಾಹೀರಾತು ಸಂಸ್ಥೆ OLX ಮೂಲಕ ಮಾರಾಟ ಮಾಡುತ್ತಿದ್ದು, ಈಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಹರಿಯಾಣದ ಜಜ್ಜರ್ ನಿವಾಸಿ ಅಜಯ್ ದಬಾಸ್ ಬಂಧಿತ ಆರೋಪಿಯಾಗಿದ್ದು, ಹೈಫೈ ಜೀವನ ಶೈಲಿಗೆ ಮಾರು ಹೋಗಿದ್ದ ಈತ, ಸುಲಭವಾಗಿ ಹಣ ಗಳಿಸಲು ಈ ಮಾರ್ಗ ಹಿಡಿದಿದ್ದ ಎನ್ನಲಾಗಿದೆ. ಕಾರು ಮಾರಾಟದ ಬಳಿಕ ಬಂದ ಹಣವನ್ನು ಡಿಸ್ಕೋ ಥೆಕ್ ಗಳಲ್ಲಿ ಉಡಾಯಿಸುತ್ತಿದ್ದುದ್ದಲ್ಲದೇ ತನ್ನ ಗರ್ಲ್ ಫ್ರೆಂಡ್ ಗಳಿಗೆ ದುಬಾರಿ ಬೆಲೆಯ ಗಿಫ್ಟ್ ನೀಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯೋರ್ವ ಆಡಿ ಹಾಗೂ ಫಾರ್ಚೂನರ್ ಕಾರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದರ ಸುಳಿವು ಪಡೆದ ಪೊಲೀಸರು ದಾಳಿ ನಡೆಸಿದ ವೇಳೆ ಅಜಯ್ ದಬಾಸ್ ನ ವಂಚನೆ ಬಯಲಾಗಿದೆ. ಕಾರು ಮಾಲೀಕರಿಗೆ ಆರಂಭದಲ್ಲಿ ಬಾಡಿಗೆ ಮುಂಗಡವೆಂದು ಹೆಚ್ಚು ಹಣ ನೀಡಿ ನಂಬಿಕೆ ಹುಟ್ಟಿಸುತ್ತಿದ್ದ ಈತ, ನಕಲಿ ದಾಖಲೆ ಪತ್ರಗಳನ್ನು ನೀಡಿ ಅಗ್ರಿಮೆಂಟ್ ಮಾಡಿಕೊಳ್ಳುತ್ತಿದ್ದ. ಕಾರು ಪಡೆದ ಬಳಿಕ ತನ್ನ ನಂಬರ್ ಸ್ವಿಚಾಫ್ ಮಾಡುತ್ತಿದ್ದ ಆರೋಪಿ OLX ನಲ್ಲಿ ಈ ಕಾರುಗಳನ್ನು ಮಾರಾಟ ಮಾಡುತ್ತಿದ್ದನೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...