alex Certify
ಕನ್ನಡ ದುನಿಯಾ       Mobile App
       

Kannada Duniya

ಅನೈತಿಕ ಸಂಬಂಧ ಹೊಂದಿದ್ದ ಅಕ್ಕನ ಹತ್ಯೆ ಮಾಡಿದ ಸಹೋದರ

murder2_647_111515084350

ಬಳ್ಳಾರಿ: ಅನೈತಿಕ ಸಂಬಂಧಗಳು ಹೇಗೆಲ್ಲಾ ದುರಂತಕ್ಕೆ ಕಾರಣವಾಗುತ್ತವೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಅಕ್ಕನ ಅನೈತಿಕ ಸಂಬಂಧದಿಂದ ಬೇಸತ್ತ ತಮ್ಮ ಆಕೆಯನ್ನು ಕೊಲೆ ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆ ಕುರಗೋಡು ತಾಲ್ಲೂಕಿನ ಗ್ರಾಮವೊಂದರ 30 ವರ್ಷದ ಮಹಿಳೆ ಕೊಲೆಯಾದವರು. ಆಕೆಗೆ ಮದುವೆಯಾಗಿದ್ದು, ಪತಿ ತೀರಿ ಹೋದ ಕಾರಣ ತಮ್ಮನೊಂದಿಗೆ ತವರು ಮನೆಯಲ್ಲಿ ವಾಸವಾಗಿದ್ದಳು. ಇತ್ತೀಚೆಗೆ ಆಕೆಗೆ ಎರಡನೇ ಮದುವೆ ಮಾಡಲಾಗಿದ್ದು, ಆಕೆ ತವರಿನಲ್ಲಿಯೇ ವಾಸವಾಗಿದ್ದಳು. ಈ ನಡುವೆ ಮಹಿಳೆ ಅದೇ ಗ್ರಾಮದ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಗಂಡನ ಮನೆಗೆ ಹೋಗಲು ಹಿಂದೇಟು ಹಾಕಿದ್ದಳೆನ್ನಲಾಗಿದೆ. ಆಕೆಗೆ ತಮ್ಮನೇ ಬುದ್ಧಿವಾದ ಹೇಳಿ ಸಾಕಾಗಿದ್ದಾನೆ.

ರಾತ್ರಿ ಮನೆಗೆ ಬಂದ ಸಂದರ್ಭದಲ್ಲಿ ಅಕ್ಕನೊಂದಿಗೆ ಜಗಳವಾಗಿ ಆಕೆಯನ್ನು ದೊಣ್ಣೆಯಿಂದ ಹೊಡೆದು, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...