alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿ ಬೆತ್ತಲೆ ಮೆರವಣಿಗೆ

Rape yui5803

ಅಮಾನವೀಯವಾಗಿ ವರ್ತಿಸಿದ ದುಷ್ಕರ್ಮಿಗಳ ಗುಂಪೊಂದು, ಯುವತಿಯೊಬ್ಬಳ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆ ವಾರಂಗಲ್ ಬಳಿಯ ವರ್ಧನ್ ಪೇಟ್ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.

ವಾರಂಗಲ್ ವರ್ಧನ್ ಪೇಟ್ ಪ್ರದೇಶದಲ್ಲಿ ಆಟೋಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಬನಾಟ್ ರವಿ ಎಂಬಾತ 2015ರಲ್ಲಿ 18 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದು. ಅಲ್ಲಿಯೇ ಒಟ್ಟಿಗೆ ಜೀವನ ನಡೆಸುತ್ತಿದ್ದರು. ಯುವತಿಯನ್ನು ಮದುವೆಯಾಗುವ ಮೊದಲೇ ರವಿಗೆ ಮೊದಲ ಪತ್ನಿ ಇದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ. ಮೊದಲ ಪತ್ನಿಯನ್ನು ತೊರೆದಿದ್ದ ರವಿ, ಯುವತಿಯನ್ನು ಮದುವೆಯಾಗಿದ್ದ. ಮೊದಲ ಪತ್ನಿಗೆ ಜೀವನಾಂಶ ಕೊಡಬೇಕೆಂದು ಹಲವು ಬಾರಿ ಪಂಚಾಯಿತಿ ಕೂಡ ನಡೆಸಲಾಗಿತ್ತು.

ಮೊದಲ ಪತ್ನಿಗೆ ಜೀವನಾಂಶ ಕೊಡಲು ನಿರಾಕರಿಸಿದ್ದ ರವಿ, ಮಕ್ಕಳ ಹೆಸರಿನಲ್ಲಿ ಹಣ ಡಿಪಾಸಿಟ್ ಮಾಡುವುದಾಗಿ ಹೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ಮೊದಲ ಪತ್ನಿಯ ಸಂಬಂಧಿಕರು, ರವಿ ಹಾಗೂ ಯುವತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಯುವತಿಯ ಗುಪ್ತಾಂಗ, ತೊಡೆಗೆ ಬೆಂಕಿಯಿಂದ ಸುಟ್ಟು, ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ವಿಷಯ ತಿಳಿದ ಪೊಲೀಸರು ರಕ್ಷಣಾ ಕಾರ್ಯ ಕೈಗೊಂಡು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...