alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಘನಘೋರ ಕೃತ್ಯ

ಹೈದರಾಬಾದ್: ಅನೈತಿಕ ಸಂಬಂಧ ಪ್ರಶ್ನಿಸಿದ ಗರ್ಭಿಣಿಯನ್ನು ಹತ್ಯೆ ಮಾಡಿ, ಮೃತದೇಹ ಕತ್ತರಿಸಿ ಗೋಣಿ ಚೀಲದಲ್ಲಿ ಹಾಕಿ ಬಿಸಾಡಿದ್ದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಸೇರಿ ಇಬ್ಬರು ತಲೆ ಮರೆಸಿಕೊಂಡಿದ್ದಾರೆ.

ಬಿಹಾರ ಮೂಲದ ಪಿಂಕಿ ಕೊಲೆಯಾದ ಗರ್ಭಿಣಿ. 15 ವರ್ಷಗಳ ಹಿಂದೆ ಮದುವೆಯಾಗಿದ್ದ ಪಿಂಕಿ ಪತಿಯಿಂದ ದೂರವಾಗಿ ವಿಕಾಸ್ ಎಂಬುವವನೊಂದಿಗೆ ಬಿಹಾರದಲ್ಲಿಯೇ ವಾಸವಾಗಿದ್ದರು.

ನಂತರದಲ್ಲಿ ವಿಕಾಸ್ ಹೈದರಾಬಾದ್ ಗೆ ಬಂದಿದ್ದು, ಬಿಹಾರ ಮೂಲದ ಮಮತಾ ಎಂಬ ಮಹಿಳೆಯ ಕುಟುಂಬದೊಂದಿಗೆ ವಾಸವಾಗಿದ್ದಾನೆ. ಮಮತಾ ಹಾಗೂ ವಿಕಾಸ್ ಗೂ ಅಕ್ರಮ ಸಂಬಂಧ ಬೆಳೆದಿದೆ. ವಿಕಾಸ್ ಹೈದರಾಬಾದ್ ನಲ್ಲಿ ನೆಲೆಸಿರುವ ಮಾಹಿತಿ ತಿಳಿದ ಪಿಂಕಿ ಇಲ್ಲಿಗೆ ಬಂದಿದ್ದಾಳೆ. ವಿಕಾಸ್ ಹಾಗೂ ಮಮತಾ ನಡುವಿನ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಾಳೆ.

ಇದರಿಂದ ಆಕ್ರೋಶಗೊಂಡ ವಿಕಾಸ್, ಮಮತಾ, ಮಮತಾಳ ಪತಿ ಅನಿಲ್ ಝಾ, ಮಗ ಅಮರ್ ಕಾಂತ್ ಝಾ ಅವರು, ಸಿದ್ದಿಕ್ ನಗರದಲ್ಲಿನ ಮನೆಯಲ್ಲಿ 8 ತಿಂಗಳ ಗರ್ಭಿಣಿಯಾಗಿದ್ದ ಪಿಂಕಿಯನ್ನು ಕೊಲೆ ಮಾಡಿದ್ದಾರೆ. ಮೃತದೇಹವನ್ನು ಕತ್ತರಿಸಿ ಚೀಲದಲ್ಲಿ ಹಾಕಿದ್ದು, ಬೈಕ್ ನಲ್ಲಿ ತೆಗೆದುಕೊಂಡು ಹೋಗಿ ಬಿಸಾಡಿದ್ದಾರೆ.

ಜನವರಿ 31 ರಂದು ಗೋಣಿಚೀಲದಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿ ಪೊಲೀಸರು ತನಿಖೆ ಕೈಗೊಂಡಿದ್ದರು. ಮೃತದೇಹ ಸಿಕ್ಕಿದ್ದ ಸ್ಥಳವನ್ನು ಸಂಪರ್ಕಿಸುವ ವಿವಿಧ ರಸ್ತೆಗಳ ಸಿ.ಸಿ. ಕ್ಯಾಮೆರಾ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಕಾಸ್ ಹಾಗೂ ಅಮರ್ ಕಾಂತ್ ಝಾ ಪರಾರಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...