alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗಾಗಿ ಅಪ್ರಾಪ್ತೆಯರನ್ನು ಖರೀದಿ ಮಾಡುತ್ತಿದ್ದವರು ಸಿಕ್ಕಿಬಿದ್ರು

ಹೈದ್ರಾಬಾದ್ ಪೊಲೀಸರು ಬುಧವಾರ ಶೇಖ್ ಮ್ಯಾರೇಜ್ ರಾಕೆಟ್ ಬಣ್ಣ ಬಯಲು ಮಾಡಿದ್ದಾರೆ. ಪೊಲೀಸರು ಓಮಾನ್ ಮತ್ತು ಕತಾರ್ ಮೂಲದ 8 ಮಂದಿಯನ್ನು ಬಂಧಿಸಿದ್ದಾರೆ. ಈ ಎಲ್ಲರ ಮೇಲೂ ಅಪ್ರಾಪ್ತ ಬಾಲಕಿಯರ ಖರೀದಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಬಾಲಕಿಯರನ್ನು ಮದುವೆಯಾಗಲು ಈ ಶೇಖ್ ಗಳು 10 ಲಕ್ಷದವರೆಗೆ ಖರ್ಚು ಮಾಡುತ್ತಿದ್ದರಂತೆ. ಬ್ರೋಕರ್ಸ್ ಹಾಗೂ ಕಾಜಿಗಳ ಮೂಲಕ ಅಪ್ರಾಪ್ತೆಯರನ್ನು ಖರೀದಿಸುವ ವ್ಯವಹಾರ ನಡೆಸುತ್ತಿದ್ದರಂತೆ. ಮೂವರು ಕಾಜಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದ್ರಲ್ಲಿ ಮುಖ್ಯ ಕಾಜಿ ಮುಂಬೈನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಬಂಧಿತರಲ್ಲಿ ಐವರು ಬ್ರೋಕರ್ಸ್ ಸೇರಿದ್ದಾರೆ. ಶೇಖ್, ಕಾಜಿ ಹಾಗೂ ಬ್ರೋಕರ್ ಗಳ ಈ ರಾಕೆಟ್ ದೀರ್ಘಕಾಲದಿಂದ ಸಕ್ರಿಯವಾಗಿತ್ತಂತೆ. ಆಗಸ್ಟ್ ನಲ್ಲಿಯೂ ಇಂತಹದೇ ಘಟನೆ ಬೆಳಕಿಗೆ ಬಂದಿತ್ತು.

ಬಡ ಕುಟುಂಬವನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಇವರು ಚಿಕ್ಕ ಹುಡುಗಿಯರನ್ನು ಖರೀದಿ ಮಾಡುತ್ತಿದ್ದರು. ಹಣದ ಆಸೆ ತೋರಿಸಿ ಗಲ್ಫ್ ನಲ್ಲಿ ಹುಡುಗಿಯರು ಖುಷಿಯಾಗಿರುತ್ತಾರೆಂಬ ಭರವಸೆ ನೀಡಿ ಅವರನ್ನು ಕರೆದೊಯ್ಯುತ್ತಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...