alex Certify
ಕನ್ನಡ ದುನಿಯಾ       Mobile App
       

Kannada Duniya

20 ಸಾವಿರ ಕದ್ದು ಸಿಕ್ಕಿಬಿದ್ದವ ಸಾಮಾನ್ಯನಲ್ಲ…ಕೋಟ್ಯಾಧಿಪತಿ…!

ಪಾಟ್ನಾದಲ್ಲಿ ಪೊಲೀಸರೇ ದಂಗಾಗುವ ಘಟನೆ ನಡೆದಿದೆ. 20 ಸಾವಿರ ಕದ್ದ ಕಳ್ಳನೊಬ್ಬನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದ್ರೆ 20 ಸಾವಿರ ಕದ್ದ ಕಳ್ಳನ ಹಿನ್ನೆಲೆ ಪೊಲೀಸರು ಹುಬ್ಬೇರಿಸುವಂತೆ ಮಾಡಿದೆ.

ರಾಜೀವ್ ನಗರದ ರಾಧಾ ಸ್ವಾಮಿ ಆಯಿಲ್ ಮಿಲ್ ಜನರಲ್ ಸ್ಟೋರ್ ನಲ್ಲಿ 20 ಸಾವಿರ ರೂಪಾಯಿ ಕಳ್ಳತನವಾಗಿತ್ತು. ಅಂಗಡಿ ಮಾಲೀಕ ತಕ್ಷಣ ಪೊಲೀಸರಿಗೆ ದೂರು ನೀಡಿದ್ದ. ದೂರಿನ ಮೇಲೆ ಅಂಗಡಿಗೆ ಬಂದ ಪೊಲೀಸರು ಸಿಸಿ ಟಿವಿ ಪರಿಶೀಲನೆ ನಡೆಸಿದ್ದಾರೆ. ಕಳ್ಳನ ಮುಖ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದೇ ಪ್ರದೇಶದ ಫ್ಲಾಟ್ ಒಂದರಲ್ಲಿ ವಾಸವಾಗಿರುವ ಶಂಭುನಾಥ್ ಕಳ್ಳ ಎಂಬ ಸಂಗತಿ ಬಹಿರಂಗವಾಗಿದೆ. ಶಂಭುನಾಥ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಂಭುನಾಥ್ ನಿಂದ 700 ರೂಪಾಯಿ ವಶಕ್ಕೆ ಪಡೆದಿದ್ದಾರೆ. ಅಂಗಡಿ ಮಾಲೀಕ 20 ಸಾವಿರ ಕಳ್ಳತನವಾಗಿದೆ ಎಂದ್ರೆ ಶಂಭುನಾಥ್ ನಾನು ಕದ್ದಿದ್ದು 700 ಮಾತ್ರ ಎನ್ನುತ್ತಿದ್ದಾನೆ. ಮೂವರು ಮಕ್ಕಳು. ಅವ್ರಿಗಾಗಿ ಕಳ್ಳತನ ಮಾಡಿದೆ ಎಂದು ಸುಳ್ಳು ಹೇಳಿದ್ದಾನೆ.

ವಿಚಾರಣೆ ವೇಳೆ ಶಂಭುನಾಥ್ ಬಣ್ಣ ಬಯಲಾಗಿದೆ. ಶಂಭುನಾಥ್ ಕೋಟ್ಯಾಧಿಪತಿ ಎಂಬುದು ತಿಳಿದಿದೆ. ಆಯಿಶಾ ನಗರದಲ್ಲಿ ಎರಡು ಫ್ಲಾಟ್ ಹೊಂದಿದ್ದಾನೆ ಶಂಭುನಾಥ್. ಅಷ್ಟೇ ಅಲ್ಲ ಆರ್ವಾಲ್ ಜಿಲ್ಲೆಯಲ್ಲಿ ಶಂಭುನಾಥ್ ಹೆಸರಿನಲ್ಲಿ ಕೆಲ ಜಮೀನಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...