alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿ ಪತಿಯಿಂದ ದೂರ ಇದ್ದವಳ ಬಣ್ಣ ಬಯಲು

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಮದುವೆ ನಾಟಕವಾಡಿ ಲಕ್ಷಾಂತರ ರೂಪಾಯಿ ದೋಚುತ್ತಿದ್ದವಳು ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾಳೆ. ಮನೆಯಲ್ಲಿ ಬಡತನವೆಂದು ಸುಳ್ಳು ಹೇಳಿ ಹಣ ಪಡೆದು ಮದುವೆಯಾಗ್ತಿದ್ದವಳು ಮದುವೆ ನಂತ್ರ ಹಣ ಕದ್ದು ಪರಾರಿಯಾಗ್ತಿದ್ದಳು.

ಕೆಲ ದಿನಗಳ ಹಿಂದಷ್ಟೇ ಜೀವನ್ ಎಂಬಾತನಿಗೆ ಮೋಸ ಮಾಡಿದ್ದ ಮಾಹಿಯನ್ನು ಪೊಲೀಸರು ಬಂಧಿಸಿದ್ದಾರೆ. ತಂದೆ-ತಾಯಿ, ಚಿಕ್ಕಪ್ಪ ಎಂಬ ಮೂವರ ಜೊತೆ ಜೀವನ್ ಪರಿಚಯ ಮಾಡಿಕೊಂಡಿದ್ದ ಮಾಹಿ 70 ಸಾವಿರ ರೂಪಾಯಿ ಪಡೆದಿದ್ದಳು. ನಂತ್ರ ಮದುವೆ ಖರ್ಚನ್ನು ಜೀವನ್ ನೋಡಿಕೊಂಡಿದ್ದ. ಮೊದಲ ರಾತ್ರಿ ಪೂಜೆ ನೆಪ ಹೇಳಿ ಪತಿಯಿಂದ ದೂರವಿದ್ದವಳು ಎರಡನೇ ದಿನ ಬ್ಯೂಟಿಪಾರ್ಲರ್ ಹೆಸರು ಹೇಳಿ ಓಡಿ ಹೋಗಿದ್ದಳು.

ಬಾಡಿಗೆಗಿದ್ದ ಆಕೆ ಮನೆಗೆ ಹೋಗಿ ನೋಡಿದಾಗ ಜೀವನ್ ಗೆ ಸತ್ಯ ಅರ್ಥವಾಗಿದೆ. ಈ ಬಗ್ಗೆ ಜೀವನ್ ಪೊಲೀಸರಿಗೆ ದೂರು ನೀಡಿದ್ದ. ದೂರು ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದ ಪೊಲೀಸರು ಮಾಹಿ ಸೇರಿ ಇನ್ನೊಬ್ಬಳನ್ನು ಬಂಧಿಸಿದ್ದಾರೆ. ಆದ್ರೆ ಇಬ್ಬರು ಪುರುಷರು ತಲೆ ಮರೆಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...