alex Certify
ಕನ್ನಡ ದುನಿಯಾ       Mobile App
       

Kannada Duniya

ವರದಕ್ಷಿಣೆಗಾಗಿ ಪತ್ನಿಯ ಕಿಡ್ನಿ ಮೇಲೆ ಕಣ್ಣು ಹಾಕಿದ ಪತಿ…!

ಪಶ್ಚಿಮ ಬಂಗಾಳದಲ್ಲಿ ಪತಿಯೇ ತನ್ನ ಪತ್ನಿಯ ಕಿಡ್ನಿ ತೆಗೆದು ಮಾರಾಟ ಮಾಡಿದ್ದಾನೆ. 28 ವರ್ಷದ ರೀಟಾ ಸರ್ಕಾರ್ ಎಂಬ ಮಹಿಳೆಯ ಪತಿ ಮತ್ತು ಮೈದುನನನ್ನು ಪೊಲೀಸರು ಬಂಧಿಸಿದ್ದಾರೆ.

2 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಗಂಡ ಮತ್ತು ಅತ್ತೆ ಮಾವ ರೀಟಾಳನ್ನು ಹಿಂಸಿಸುತ್ತಿದ್ರು. 2016ರಲ್ಲಿ ಆಕೆಗೆ ಹೊಟ್ಟೆ ನೋವು ಶುರುವಾಗಿತ್ತು. ಶಸ್ತ್ರಚಿಕಿತ್ಸೆ ಮೂಲಕ ಅಪೆಂಡಿಕ್ಸ್ ತೆಗೆದುಹಾಕಿದ್ರೆ ಹೊಟ್ಟೆನೋವು ಕಡಿಮೆಯಾಗುತ್ತದೆ ಅಂತಾ ವೈದ್ಯರು ತಿಳಿಸಿದ್ರು. ಆದ್ರೆ ಸರ್ಜರಿ ವೇಳೆ ರೀಟಾಳ ಕಿಡ್ನಿಯನ್ನೇ ತೆಗೆಯಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ರೀಟಾ ವಿಪರೀತ ನೋವು ಅನುಭವಿಸಿದ್ಲು.

ಆಪರೇಷನ್ ಬಗ್ಗೆ ಯಾರ ಬಳಿಯೂ ಬಾಯ್ಬಿಡದಂತೆ ಪತಿ ಎಚ್ಚರಿಸಿದ್ದ. ಸಂಬಂಧಿಕರ ಸಹಾಯದಿಂದ ಬೇರೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಾಗ ತನ್ನ ಒಂದು ಕಿಡ್ನಿಯೇ ಕಾಣೆಯಾಗಿರುವುದು ರೀಟಾಗೆ ಗೊತ್ತಾಗಿತ್ತು. ಪತ್ನಿಯ ಹೆತ್ತವರು 2 ಲಕ್ಷ ರೂಪಾಯಿ ವರದಕ್ಷಿಣೆ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಪತಿಯೇ ಈ ಕೃತ್ಯ ಎಸಗಿದ್ದ.

ರೀಟಾಳ ಕಿಡ್ನಿ ತೆಗೆದು ಛತ್ತೀಸ್ ಗಢದ ಉದ್ಯಮಿಯೊಬ್ಬನಿಗೆ ಮಾರಿದ್ದ. ಈ ಕೃತ್ಯಕ್ಕೆ ಸಹಕರಿಸಿದ್ದ ಮೈದುನ ಮತ್ತು ನಾದಿನಿ ಮೇಲೂ ರೀಟಾ ಪ್ರಕರಣ ದಾಖಲಿಸಿದ್ದಳು. ಕಿಡ್ನಿ ಸ್ಮಗ್ಲಿಂಗ್ ಮಾಡುವ ದೊಡ್ಡ ಜಾಲವೇ ಇದರ ಹಿಂದಿದೆ ಅಂತಾನೂ ಪೊಲೀಸರು ಅನುಮಾನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...