alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಗಾಗಿ ಇಂಜೆಕ್ಷನ್ ನೀಡಿ ಮಕ್ಕಳನ್ನು ದೊಡ್ಡ ಮಾಡ್ತಿತ್ತು ಈ ಗ್ಯಾಂಗ್

ಹೈದ್ರಾಬಾದ್ ನಲ್ಲಿ ಸೆಕ್ಸ್ ರಾಕೆಟ್ ಒಂದರ ಬಣ್ಣ ಬಯಲು ಮಾಡಿರುವ ಪೊಲೀಸರು 11 ಮಕ್ಕಳನ್ನು ರಕ್ಷಿಸಿದ್ದಾರೆ. ಹೈದ್ರಾಬಾದ್ ನಿಂದ 70 ಕಿಲೋಮೀಟರ್ ದೂರದಲ್ಲಿರುವ ಯಾದವಿರಿ ಗುಟ್ಟಾದಲ್ಲಿ ಬಾಲಕಿಯರನ್ನು ಬಂಧಿಸಿಡಲಾಗಿತ್ತು. ಇದ್ರಲ್ಲಿ ಕೆಲ ಹುಡುಗಿಯರು ಶಾಲೆ ಸಮವಸ್ತ್ರದಲ್ಲಿದ್ದರು.

ಬಾಲಕಿಯರ ವಿಚಾರಣೆ ವೇಳೆ ಆಘಾತಕಾರಿ ವಿಷ್ಯಗಳು ಬಹಿರಂಗವಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದ್ರಲ್ಲಿ 6 ಮಹಿಳೆಯರು ಸೇರಿದ್ದಾರೆ. ಬಾಲಕಿಯರಿಗೆ ಹಾರ್ಮೋನ್ ಇಂಜೆಕ್ಷನ್ ನೀಡಿ, ಸೆಕ್ಸ್ ಗಾಗಿ ಮಕ್ಕಳನ್ನು ದೊಡ್ಡ ಮಾಡಲಾಗ್ತಾಯಿತ್ತು. ಪೊಲೀಸರಿಂದ ರಕ್ಷಿಸಲ್ಪಟ್ಟಿರುವ ಕೆಲ ಬಾಲಕಿಯರ ವಯಸ್ಸು 7 ವರ್ಷಕ್ಕಿಂತ ಕಡಿಮೆಯಿದೆ.

ಬಡ ಮಕ್ಕಳನ್ನು ಹಣ ಕೊಟ್ಟು ಖರೀದಿ ಮಾಡಲಾಗ್ತಾಯಿತ್ತು. ವಯಸ್ಸು ಹೆಚ್ಚಾಗಿರುವ ಬಾಲಕಿಯರ ಕುಟುಂಬಗಳಿಗೆ ಹೆಚ್ಚು ಹಣ ಸಿಗ್ತಾಯಿತ್ತು. ರೈಲ್ವೆ ನಿಲ್ದಾಣ ಅಥವಾ ಅನಾಥವಾಗಿರುವ ಮಕ್ಕಳನ್ನು ಇವ್ರು ಹುಡುಕುತ್ತಿದ್ದರು. ಹಾರ್ಮೋನ್ ಇಂಜೆಕ್ಷನ್ ಗೆ ವೈದ್ಯ 20-25 ಸಾವಿರ ರೂಪಾಯಿ ಪಡೆಯುತ್ತಿದ್ದ ಎನ್ನಲಾಗಿದೆ.

ಆತನನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ. ಮಗುವೊಂದು ಕಿರುಕುಳ ತಾಳಲಾರದೆ ಪೊಲೀಸ್ ಬಳಿ ಓಡಿ ಬಂದಿತ್ತು. ಆರಂಭದಲ್ಲಿ ಆರೋಪಿ ಮಹಿಳೆ ಮಗು ತನ್ನದೆ ಎಂದು ವಾದ ಮಾಡಿದ್ಲು. ವಿಚಾರಣೆ ನಂತ್ರ ಸೆಕ್ಸ್ ರಾಕೆಟ್ ಸತ್ಯ ಹೊರ ಬಿದ್ದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...