alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂನಿಂದ ಹೊರ ಬಂತು 2 ಸಾವಿರ ರೂ. ನಕಲಿ ನೋಟು

download

ನಕಲಿ ನೋಟು ಹಾಗೂ ಕಪ್ಪುಹಣದ ವಿರುದ್ಧ ಸಮರ ಸಾರಿ ನೋಟು ನಿಷೇಧ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯೋಜನೆ ಸಫಲವಾದಂತೆ ಕಾಣ್ತಿಲ್ಲ. ಹೊಸ 500 ಹಾಗೂ 2 ಸಾವಿರ ಮುಖ ಬೆಲೆಯ ನೋಟುಗಳು ಮಾರುಕಟ್ಟೆಗೆ ಬಂದಿವೆ. ಆದ್ರೆ ನಕಲಿ ನೋಟುಗಳ ಹಾವಳಿ ಕೂಡ ಜೋರಾಗಿದೆ. ಜೈಸಲ್ಮೇರ್ ನ ಎಟಿಎಂನಲ್ಲಿ ನಕಲಿ ನೋಟು ಬಂದಿದೆ.

ಜೈಸಲ್ಮೇರ್ ಎಟಿಎಂನಲ್ಲಿ ಸಿಕ್ಕ ನಕಲಿ ನೋಟು ಇಡೀ ನಗರದಲ್ಲಿ ಚರ್ಚೆಯ ವಿಷಯವಾಗಿದೆ. ಛೋಟಾರಾಮ್ ಎಂಬಾತ ಎಟಿಎಂನಿಂದ ಮೂರು ಸಾವಿರ ರೂಪಾಯಿ ಡ್ರಾ ಮಾಡಿದ್ದಾನೆ. 500 ರ ಎರಡು ನೋಟು ಹಾಗೂ 2 ಸಾವಿರ ಮುಖ ಬೆಲೆಯ 1 ನೋಟು ಬಂದಿದೆ. ಹಣ ಡ್ರಾ ಮಾಡಿ ಮಾರುಕಟ್ಟೆಗೆ ಹೋದಾಗ ಇದು ನಕಲಿ ಎಂಬುದು ಗೊತ್ತಾಗಿದೆ. ತಕ್ಷಣ ಬ್ಯಾಂಕ್ ಗೆ ಹೋಗಿ ವಿಷಯ ತಿಳಿಸಿದ್ದಾನೆ ಛೋಟಾರಾಮ್.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮ್ಯಾನೇಜರ್ ಈ ಬಗ್ಗೆ ತನಿಖೆ ಶುರುಮಾಡಿದ್ದಾರೆ. ನಕಲಿ ನೋಟು ಎಟಿಎಂಗೆ ಹೇಗೆ ತಲುಪ್ತು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...