alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಕ್ಕೆ ಬೆಲೆ ನಿಗದಿಪಡಿಸಿದ ಪಂಚಾಯತಿ

ಉತ್ತರ ಪ್ರದೇಶದ ಮೀರತ್ ನಲ್ಲಿ ಅತ್ಯಾಚಾರಕ್ಕೆ ಬೆಲೆ ನಿಗದಿಪಡಿಸಲಾಗಿದೆ. ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತ ಪಂಚಾಯತಿ ಸದಸ್ಯರು ಹಣದ ಜೊತೆ ಅತ್ಯಾಚಾರವನ್ನು ತೂಗಿದ್ದಾರೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ 5 ಲಕ್ಷ ದಂಡ ವಿಧಿಸಿ ಬಿಟ್ಟಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

ಜಿಲ್ಲೆಯ ಲಕಿಪುರದಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿ ಮೇಲೆ ಪಕ್ಕದ ಮನೆ ಯುವಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಬಾಲಕಿ ಗರ್ಭಿಣಿಯಾಗ್ತಿದ್ದಂತೆ ಗರ್ಭಪಾತ ಕೂಡ ಮಾಡಿಸಿದ್ದಾನೆ. ಇದು ಬಾಲಕಿ ಕುಟುಂಬಸ್ಥರಿಗೆ ತಿಳಿದಿದೆ. ಅವರು ಪಂಚಾಯತಿಗೆ ವಿಷ್ಯ ತಿಳಿಸಿದ್ದಾರೆ.

ಗ್ರಾಮದ ಪಂಚರು ಎರಡೂ ಪಕ್ಷದವರನ್ನು ಕರೆದು ಸಂಧಾನಕ್ಕೆ ಮುಂದಾಗಿದ್ದಾರೆ. ಆರೋಪಿ ಯುವಕ 5 ಲಕ್ಷ ರೂಪಾಯಿಯನ್ನು ಪೀಡಿತೆ ಕುಟುಂಬಕ್ಕೆ ನೀಡಬೇಕೆಂದು ತೀರ್ಪು ನೀಡಿದ್ದಾರೆ. ಪಂಚರ ನಿರ್ಧಾರದಿಂದ ಅಸಮಾಧಾನಗೊಂಡ ಬಾಲಕಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...