alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನಿಂದಲೇ ನಡೀತು ಅಮಾನವೀಯ ಕೃತ್ಯ

pak

ಲಾಹೋರ್: ಪ್ರೀತಿಸಿ ಮದುವೆಯಾಗಿದ್ದ ಮಗಳಿಗೆ ಪೋಷಕರೇ ಬೆಂಕಿ ಹಚ್ಚಿ ಸುಟ್ಟುಹಾಕಿದ ಅಮಾನವೀಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಜೀನತ್ ಎಂಬ 18 ವರ್ಷದ ಯುವತಿ ಕೊಲೆಯಾದವಳು.

ಜೀನತ್ ತನ್ನ ಊರಿನವನೇ ಆದ ಯುವಕನೊಬ್ಬನನ್ನು ಪ್ರೀತಿಸಿದ್ದು, ಇದಕ್ಕೆ ಆಕೆಯ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಜೀನತ್ ಮೇಲೆ ತಾಯಿ, ಸಹೋದರ ಹಲ್ಲೆ ಮಾಡಿದ್ದಾರೆ. ಇದಕ್ಕೆ ಕೇರ್ ಮಾಡದ ಜೀನತ್ ಪ್ರೀತಿಸಿದ ಯುವಕನನ್ನು ಮದುವೆಯಾಗಿದ್ದು, ಒಂದು ವಾರದ ನಂತರ ತನ್ನ ತಾಯಿಗೆ ಕ್ಷಮಿಸುವಂತೆ ಕರೆ ಮಾಡಿದ್ದಾಳೆ. ಆಗಿದ್ದಾಯ್ತು ಮನೆಗೆ ಬಾ ಎಂದು ತಾಯಿ ಫರ್ವೀನ್ ಮಗಳನ್ನು ಕರೆಸಿಕೊಂಡಿದ್ದಾಳೆ.

ಫರ್ವೀನ್ ಹಾಗೂ ಆಕೆಯ ಪುತ್ರ ಸೇರಿಕೊಂಡು ಜೀನತ್ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಜೀನತ್ ಅಲ್ಲೇ ಶವವಾಗಿದ್ದಾಳೆ. ಆಕೆಯ ಪತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಫರ್ವಿನ್ ಳನ್ನು ಬಂಧಿಸಿದ್ದಾರೆ. ಪುತ್ರ ಪರಾರಿಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...