alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆದಾರನ ಸೂಟ್ ಕೇಸ್ ನಲ್ಲಿತ್ತು ಕಾಣೆಯಾಗಿದ್ದ ಬಾಲಕನ ಶವ

ದೆಹಲಿಯ ಸ್ವರೂಪ್ ನಗರದಲ್ಲಿ ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿಯೇ 7 ವರ್ಷದ ಬಾಲಕನನ್ನು ಕೊಲೆ ಮಾಡಿ ಸೂಟ್ ಕೇಸ್ ನಲ್ಲಿ ಅಡಗಿಸಿಟ್ಟಿದ್ದ. ಬಾಲಕ ಆಶಿಶ್ ಕಾಣೆಯಾಗಿ ಒಂದು ತಿಂಗಳ ಬಳಿಕ ಆತನ ಮೃತದೇಹ ಪತ್ತೆಯಾಗಿದೆ.

ಜನವರಿ 7ರಂದು ಆಶಿಶ್ ಕಾಣೆಯಾಗಿದ್ದ. ಆತನ ಮನೆಯಲ್ಲೇ ಬಾಡಿಗೆಗೆ ಇದ್ದ 20ರ ಯುವಕ ಅವದೇಶ್ ಸಕ್ಯ ಎಂಬಾತ ಬಾಲಕನನ್ನು ಹತ್ಯೆ ಮಾಡಿ ಸೂಟ್ ಕೇಸ್ ನಲ್ಲಿ ಹಾಕಿಟ್ಟಿದ್ದ. ನಾಥುಪುರಾ ಗ್ರಾಮದಲ್ಲಿ ಶವವಿದ್ದ ಸೂಟ್ ಕೇಸ್ ಸಿಕ್ಕಿದೆ.

ಅವದೇಶ್ ಬಾಡಿಗೆ ಕೋಣೆಯಲ್ಲಿ ಪಾರ್ಟಿ ಮಾಡುತ್ತಿದ್ದ. ಇದಕ್ಕೆ ಬಾಲಕ ಆಶೀಶ್ ನ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ರು. ಇದೇ ಕಾರಣಕ್ಕೆ ಆತ ಆಶೀಶ್ ನನ್ನು ಕೊಂದಿರಬಹುದು ಅಂತಾ ಹೇಳಲಾಗ್ತಿದೆ. ಬಾಲಕನ ಜೊತೆಗೆ ಆತ ಆತ್ಮೀಯತೆಯಿಂದಿದ್ದ. ಆಶಿಶ್ ಕೂಡ ಹಂತಕನನ್ನು ಅಂಕಲ್ ಎಂದೇ ಕರೆಯುತ್ತಿದ್ದ.

ಕಳೆದ 8 ವರ್ಷಗಳಿಂದ ಅವದೇಶ್ ಅದೇ ಮನೆಯಲ್ಲಿ ಬಾಡಿಗೆಗಿದ್ದ. ಯು ಪಿ ಎಸ್ ಸಿ ಪರೀಕ್ಷೆಗೆ ತಯಾರಿ ಮಾಡಿಕೊಳ್ತಿದ್ದ. ಮೂರು ಬಾರಿ ಪರೀಕ್ಷೆ ಬರೆದ್ರೂ ತೇರ್ಗಡೆಯಾಗಿರಲಿಲ್ಲ. ಬಾಲಕನನ್ನು ಕೊಂದು ಆತನ ಹೆತ್ತವರಿಗೆ ಬೆದರಿಕೆ ಕರೆ ಮಾಡಲು ಸಂಚು ರೂಪಿಸಿದ್ದ ಅಂತಾನೂ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...