alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯರಾತ್ರಿ 15 ಮಂದಿ ಬಾಲಾಪರಾಧಿಗಳು ಎಸ್ಕೇಪ್

ಪುನರ್ವಸತಿ ಕೇಂದ್ರದಿಂದ 15 ಮಂದಿ ಬಾಲಾಪರಾಧಿಗಳು ತಪ್ಪಿಸಿಕೊಂಡ ಘಟನೆ ಹೈದ್ರಾಬಾದ್ ಸಮೀಪ ನಡೆದಿದೆ. ಇವರುಗಳು ತಪ್ಪಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ಇಬ್ಬರು ಮೇಲ್ವಿಚಾರಕರನ್ನು ತೆಲಂಗಾಣ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಶನಿವಾರ ಮಧ್ಯರಾತ್ರಿ ಈ ಬಾಲಾಪರಾಧಿಗಳು ಕಿಟಕಿಯ ಗ್ರಿಲ್ ಗಳನ್ನು ಕತ್ತರಿಸಿ ಎರಡು-ಮೂರು ಗುಂಪುಗಳನ್ನು ಮಾಡಿಕೊಂಡು ಒಟ್ಟು 15 ಮಂದಿ ತಪ್ಪಿಸಿಕೊಂಡಿದ್ದಾರೆ. ಕೆಲವರು ಅಲ್ಲಿಯೇ ಇದ್ದ ಮೋಟಾರ್ ಸೈಕಲ್ ಗಳನ್ನೂ ಕದಿಯಲು ಯತ್ನಿಸಿದ್ದಾರೆ.

ತಪ್ಪಿಸಿಕೊಂಡ ಬಾಲಾಪರಾಧಿಗಳಲ್ಲಿ ಇಬ್ಬರು ಸಿಕ್ಕಿಬಿದ್ದಿದ್ದು, ಇನ್ನೂ 13 ಮಂದಿಯ ಹುಡುಕಾಟದಲ್ಲಿದ್ದೇವೆ ಅಂತಾ ಸೈದಾಬಾದ್ ಅಧಿಕಾರಿಗಳು ತಿಳಿಸಿದ್ದು, ತಪ್ಪಿಸಿಕೊಂಡಿರುವ ಪ್ರತಿಯೊಬ್ಬ ಬಾಲಾಪರಾಧಿಗಳ ಮೇಲೆ ದರೋಡೆ ಮತ್ತು ಕೊಲೆ ಸೇರಿದಂತೆ ಕನಿಷ್ಠ ಐದು ಪ್ರಕರಣಗಳಿವೆ ಎಂದು ಹೇಳಲಾಗಿದೆ.

ನಾಗೋಲೆ ಪುನರ್ವಸತಿ ಕೇಂದ್ರ ಮುಚ್ಚಿದ್ರಿಂದ, ಇದರ ಹತ್ತಿರವೇ ಇದ್ದ ಸೈದಾಬಾದ್ ನ ಸೆಂಟರ್ ಗೆ ಬಾಲಾಪರಾಧಿಗಳನ್ನ ಸ್ಥಳಾಂತರಿಸಲಾಗಿತ್ತು. ಆದ್ರೆ ಈ ಕೇಂದ್ರದಲ್ಲಿನ ಹಲವಾರು ಲೋಪದೋಷಗಳು ಈಗ ಬೆಳಕಿಗೆ ಬಂದಿವೆ.

ಬಾಲಾಪರಾಧಿಗಳನ್ನು ಬಂಧನದಲ್ಲಿಟ್ಟುಕೊಂಡು ಅವರನ್ನ ಕೈದಿಯಂತೆ ನೋಡಿಕೊಳ್ಳಲಾಗ್ತಿದೆ. ಅವರನ್ನು ಮುಕ್ತವಾಗಿ ಆಡಲು ಬಿಡುವುದಿಲ್ಲ. ಕೆಲವು ಹುಡುಗರು, ಮದ್ಯ ಮತ್ತು ಡ್ರಗ್ಸ್ ವ್ಯಸನಿಗಳಾಗಿದ್ದಾರೆ. ಅಲ್ಲದೆ ಈ ಬಾಲಾಪರಾಧಿಗಳು ದುಶ್ಚಟಗಳಿಂದ ದೂರವಿರಿಸುವಂತಹ ಯಾವುದೇ ಕಾರ್ಯಕ್ರಮಗಳು ಇಲ್ಲಿ ನಡೆಯುವುದಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಈ ಪುನರ್ವಸತಿ ಕೇಂದ್ರ ಸುದ್ದಿಯಾಗ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ 2015 ರಲ್ಲೂ 11 ವರ್ಷದ ಬಾಲಕ ಇಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ. ಆದ್ರೆ ಆ ಬಗ್ಗೆ ಸರಿಯಾಗಿ ವಿಚಾರಣೆ ನಡೆದಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...