alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ನಲ್ಲಿ ದಲಿತ ವ್ಯಕ್ತಿಯ ಬರ್ಬರ ಹತ್ಯೆ

ದಲಿತ ಜನಾಂಗಕ್ಕೆ ಸೇರಿದ ವ್ಯಕ್ತಿಯನ್ನು ಹಗ್ಗದಲ್ಲಿ ಕಟ್ಟಿಹಾಕಿ, ಕಬ್ಬಿಣದ ರಾಡ್ ನಿಂದ ಹೊಡೆದು ಕೊಂದು ಹಾಕಿದ ಶಾಕಿಂಗ್ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ. ಪೊಲೀಸರಿಗೆ ಬಂದ ದೂರಿನ ಪ್ರಕಾರ ಆಟೋಮೊಬೈಲ್ ಫ್ಯಾಕ್ಟರಿಯ ಮಾಲೀಕನ ಆದೇಶದ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ. ಗಂಭೀರವಾಗಿ ಥಳಿಸಿದ್ದರಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಅಲ್ಲದೆ ಆತನ ಪತ್ನಿಯನ್ನೂ ಕೂಡಾ ಹೊಡೆದಿದ್ದಾರೆ ಅಂತಾ ಪೊಲೀಸರು ತಿಳಿಸಿದ್ದಾರೆ.

ಮುಕೇಶ್ ವನಿಯಾ ಮತ್ತು ಆತನ ಪತ್ನಿ ಚಿಂದಿ ಆಯುವವರಾಗಿದ್ದು, ಆಟೋಮೊಬೈಲ್ ಫ್ಯಾಕ್ಟರಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ರು ಅಂತಾ ಹೇಳಲಾಗ್ತಿದೆ. ಈ ವೇಳೆ ಫ್ಯಾಕ್ಟರಿ ಕಾರ್ಮಿಕರಿಗೆ ಸಿಕ್ಕಿಬಿದ್ದಿದ್ದು, ಅವರನ್ನ ಕಟ್ಟಿಹಾಕಿ ಹೊಡೆದಿದ್ದಾರೆ. ಅಲ್ಲಿಂದ ಮುಕೇಶ್ ಪತ್ನಿ ತಪ್ಪಿಸಿಕೊಂಡು ಹೋಗಿ ತನ್ನ ಹಳ್ಳಿ ಜನರನ್ನು ಕರೆದುಕೊಂಡು ಬರುವಷ್ಟರಲ್ಲಿ, ಪತಿ ನೆಲದ ಮೇಲೆ ಬಿದ್ದಿದ್ದ. ತಕ್ಷಣವೇ ಅವನನ್ನ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಆತ ಸಾವನ್ನಪ್ಪಿದ ಬಗ್ಗೆ ದೃಢಪಡಿಸಿದ್ದಾರೆ. ಘಟನೆ ಸಂಬಂಧ ಕಾರ್ಖಾನೆ ಮಾಲೀಕ ಸೇರಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ.

ಈ ದೃಶ್ಯವನ್ನ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಾಕಿ ಟ್ವಿಟ್ ಮಾಡಿರುವ ಶಾಸಕ ಜಿಗ್ನೇಶ್ ಮೇವಾನಿ, ದಲಿತ ವ್ಯಕ್ತಿಯಾಗಿರುವ ಮುಕೇಶ್ ವನಿಯಾರನ್ನ ಕಾರ್ಖಾನೆ ಮಾಲಿಕ ಹೊಡೆದು ಕೊಂದಿದ್ದಾನೆ. ಮತ್ತು ಆತನ ಪತ್ನಿಗೆ ಗಂಭೀರವಾಗಿ ಥಳಿಸಿದ್ದಾರೆ. ಇದು 2016ರಲ್ಲಿ ನಡೆದ ಊನಾ ಘಟನೆಗಿಂತ ಗಂಭೀರವಾಗಿದೆ. ಅಂದು ಹಸಿವಿನಿಂದ ಗೋಮಾಂಸವನ್ನು ತಿನ್ನುತ್ತಿದ್ದ ದಲಿತರನ್ನು ಹೊಡೆದು ಹಾಕಿದ್ರು ಎಂದಿದ್ದಾರೆ. ಹಾಗೆಯೇ ಗುಜರಾತ್ ನಲ್ಲಿ ದಲಿತರಿಗೆ ಸುರಕ್ಷತೆ ಇಲ್ಲಾ ಅಂತಾ ಟ್ವಿಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...