alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರೆದುರು ತನ್ನ ನೀಚ ಕೃತ್ಯದ ಬಗ್ಗೆ ಬಾಯ್ಬಿಟ್ಟ ಓಲಾ ಚಾಲಕ

ಹೈದ್ರಾಬಾದ್ ನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡ ಓಲಾ ಕ್ಯಾಬ್ ಚಾಲಕನನ್ನು ಹಿಡಿದು ವಿಚಾರಣೆ ನಡೆಸಿದಾಗ ಅಪ್ರಾಪ್ತೆ ಮೇಲೆ ನಡೆದಿದ್ದ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಓಲಾ ಚಾಲಕನಾಗಿರುವ ಕಂಡುಕುರಿ ನಾಗ ಮಧು ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ವಾರದ ಹಿಂದಷ್ಟೆ ಈತ ಪ್ರಯಾಣಿಕಳ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದ. ವಿಚಾರಣೆ ಸಂದರ್ಭದಲ್ಲಿ ತಾನು 2017ರ ಅಕ್ಟೋಬರ್ ನಲ್ಲಿ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿರೋದಾಗಿ ಬಾಯ್ಬಿಟ್ಟಿದ್ದಾನೆ. ಜನವರಿ 5ರಂದು ಚಕ್ರಿಪುರಂಗೆ ಪ್ರಯಾಣಿಕರನ್ನು ಡ್ರಾಪ್ ಮಾಡಿ ಬರುತ್ತಿದ್ದ ಕಿರಣ್, ರಾಧಿಕಾ ಕ್ರಾಸ್ ರೋಡ್ ನಲ್ಲಿ ನಿಂತಿದ್ದ ಮಹಿಳೆಯನ್ನು ಗಮನಿಸಿದ್ದ.

ಅವಳನ್ನು ಡ್ರಾಪ್ ಮಾಡುವುದಾಗಿ ಕಾರು ಹತ್ತಿಸಿಕೊಂಡು ಸ್ವಲ್ಪ ದೂರ ಬಂದಮೇಲೆ ರೂಟ್ ಬದಲಾಯಿಸಿದ್ದ. ಆಕೆ ಪ್ರಶ್ನಿಸಿದಾಗ ಬೇರೊಂದು ಟ್ರಿಪ್ ಬಂದಿದೆ ಹಾಗಾಗಿ ಈ ರೂಟ್ ನಲ್ಲಿ ಹೋಗುತ್ತೇನೆ ಎಂದಿದ್ದ. ನಂತರ ತನ್ನ ಪಕ್ಕದ ಸೀಟಿನಲ್ಲಿ ಕೂರುವಂತೆ ಸೂಚಿಸಿ ಆಕೆಯನ್ನು ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಮಹಿಳೆ ಕೂಗಿಕೊಂಡಿದ್ದರಿಂದ ಹೆದರಿ ಅವಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...