alex Certify
ಕನ್ನಡ ದುನಿಯಾ       Mobile App
       

Kannada Duniya

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಯುವತಿ, ಯುವಕರಿಗೆ ಥಳಿತ

ಬಡಿಪಾಡ: ನಕಲಿ ಕಾರ್ಡ್ ಬಳಸಿ ಎ.ಟಿ.ಎಂ.ನಲ್ಲಿ ಹಣ ದೋಚಲು ಬಂದಿದ್ದ ಮೂವರನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಒಡಿಶಾದ ಬಡಿಪಾಡದಲ್ಲಿ ನಡೆದಿದೆ.

ಬಡಿಪಾಡದ ರಾಷ್ಟ್ರೀಯ ಹೆದ್ದಾರಿ 18 ರಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ.) ಗೆ ಸೇರಿದ ಎ.ಟಿ.ಎಂ.ನಲ್ಲಿ ವ್ಯಕ್ತಿಯೊಬ್ಬರು ಹಣ ಪಡೆಯುವ ಸಂದರ್ಭದಲ್ಲಿ ಓರ್ವ ಯುವತಿ, ಇಬ್ಬರು ಯುವಕರು ಎಂಟ್ರಿ ಕೊಟ್ಟಿದ್ದಾರೆ.

ಹಣ ಪಡೆಯುತ್ತಿದ್ದ ವ್ಯಕ್ತಿಗೆ ಸಹಾಯ ಮಾಡುವ ನೆಪದಲ್ಲಿ ಆತನ ಕೈ ಹಿಡಿದುಕೊಂಡಿದ್ದಾರೆ. ವ್ಯಕ್ತಿ ಗಾಬರಿಯಿಂದ ಕೂಗಾಡಿದಾಗ, ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ.

ಯುವತಿ ಹಾಗೂ ಯುವಕರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂವರ ಬಳಿ ವಿವಿಧ ಬ್ಯಾಂಕ್ ಗಳಿಗೆ ಸೇರಿದ 34 ಎ.ಟಿ.ಎಂ. ಕಾರ್ಡ್ ಗಳು ಸಿಕ್ಕಿವೆ. ಅವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...