alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿನಿಗೆ ಐ ಲವ್ ಯೂ ಹೇಳಿದ ಶಿಕ್ಷಕ..ಆಮೇಲೆ?

odisha-teacher

ಇತ್ತೀಚಿನ ದಿನಗಳಲ್ಲಿ ಫ್ಲರ್ಟಿಂಗ್ ಸಾಮಾನ್ಯವಾಗಿದೆ. ಪ್ರೀತಿ-ಪ್ರೇಮ ಅಂತಾ ಹುಡುಗರು ಹುಡುಗಿಯರ ಹಿಂದೆ ಬೀಳ್ತಾರೆ. ಆದ್ರೆ ಓಡಿಶಾದಲ್ಲಿ ಎಂಟನೇ ಕ್ಲಾಸ್ ಹುಡುಗಿಗೆ ಐ ಲವ್ ಯೂ ಹೇಳಿದ ಶಿಕ್ಷಕನಿಗೆ ಇದು ದುಬಾರಿಯಾಗಿ ಪರಿಣಮಿಸಿದೆ.

ಡಿಸೆಂಬರ್ 28ರಂದು ಅಂಗುಲ್ ಜಿಲ್ಲೆಯ ಶಾಲೆಯೊಂದರಲ್ಲಿ ಪ್ರಾರ್ಥನೆ ನಂತ್ರ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಶಿಕ್ಷಕ ಡಾರ್ಲಿಂಗ್, ಐ ಲವ್ ಯೂ ಹೇಳಿದ್ದಾನೆ. ವಿದ್ಯಾರ್ಥಿನಿ ಈ ವಿಷಯವನ್ನು ಮನೆಯವರಿಗೆ ಹೇಳಿದ್ದಾಳೆ. ನಂತ್ರ ಪ್ರಕರಣ ಗ್ರಾಮ ಸಭೆ ತಲುಪಿದೆ.

ಗ್ರಾಮಸಭೆ ಸದಸ್ಯರು ಹಾಗೂ ಶಾಲಾ ಆಡಳಿತ ಮಂಡಳಿ ಸಭೆ ನಡೆಸಿದೆ. ನಂತ್ರ ಎಲ್ಲರೆದುರು ಶಿಕ್ಷಕನಿಗೆ ವಿದ್ಯಾರ್ಥಿನಿ ಮುಂದೆ ತಲೆಬಾಗಿ ಕ್ಷಮೆ ಕೇಳುವಂತೆ ಹೇಳಲಾಗಿದೆ. ತಪ್ಪೊಪ್ಪಿಕೊಂಡ ಶಿಕ್ಷಕ ಕ್ಷಮೆ ಕೇಳಿದ್ದಾನೆ. ನಂತ್ರ ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆಯಲಾಗಿದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...