alex Certify
ಕನ್ನಡ ದುನಿಯಾ       Mobile App
       

Kannada Duniya

ಗಿಫ್ಟ್ ತೆಗೆಯುತ್ತಿದ್ದಂತೆ ಇಹಲೋಕ ತ್ಯಜಿಸಿದ ವರ

ಮದುವೆಯಾಗಿ ಐದು ದಿನವಾಗಿತ್ತು. ಕುಟುಂಬಸ್ಥರೆಲ್ಲ ರಿಸೆಪ್ಶನ್ ಮುಗಿಸಿ ಖುಷಿಯಲ್ಲಿದ್ದರು. ಬಂದ ಗಿಫ್ಟ್ ಒಂದನ್ನು ವರ ತೆಗೆದಿದ್ದಾನೆ ಅಷ್ಟೇ. ಸಂತೋಷದಿಂದ ತುಂಬಿ ತುಳುಕುತ್ತಿದ್ದ ಮನೆ ಸ್ಮಶಾನವಾಯ್ತು. ವರ, ಆತನ ಅಜ್ಜಿ ಹಾಗೂ ಇನ್ನೊಬ್ಬ ಅಪ್ರಾಪ್ತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ವಧು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಒಡಿಶಾದ ಬೋಲ್ಗಿರ್ ನಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದು ಉಡುಗೊರೆ ನೀಡಿದ್ದ. ಅದ್ರಲ್ಲಿ ಬಾಂಬ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವರ ಕುತೂಹಲಕ್ಕೆ ಗಿಫ್ಟ್ ತೆಗೆದು ನೋಡಿದ್ದಾನೆ ಅಷ್ಟೆ. ಒಳಗಿದ್ದ ಬಾಂಬ್ ಸಿಡಿದಿದೆ. ಪಕ್ಕದಲ್ಲಿಯೇ ಇದ್ದ ಅಜ್ಜಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ವಧು ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆ ಶುರು ಮಾಡಿದ್ದಾರೆ. ಉಡುಗೊರೆ ನೀಡಿದ ವ್ಯಕ್ತಿ ಯಾರು ಹಾಗೂ ಘಟನೆ ನಡೆಯಲು ಕಾರಣ ಏನು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...