alex Certify
ಕನ್ನಡ ದುನಿಯಾ       Mobile App
       

Kannada Duniya

ಕುಟುಂಬದವರ ಕಣ್ಣೆದುರಲ್ಲೇ ನಡೆದಿದೆ ಭಯಾನಕ ಕೃತ್ಯ

ಛತ್ತರ್ ಪುರ್: ಬಿ.ಜೆ.ಡಿ. ಕೌನ್ಸಿಲರ್ ಒಬ್ಬರನ್ನು ಕುಟುಂಬದವರ ಕಣ್ಣೆದುರಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಒಡಿಶಾದ ಗಾಂಜಾಂ ಜಿಲ್ಲೆಯಲ್ಲಿ ನಡೆದಿದೆ.

ಛತ್ತರ್ ಪುರ್ ವಾರ್ಡ್ ನಂ. 6 ರ ಸದಸ್ಯ, ಬಿ.ಜೆ.ಡಿ. ಮುಖಂಡ ಲಕ್ಷ್ಮಿದತ್ತ ಪ್ರಧಾನ್ ಅಲಿಯಾಸ್ ಬಚಾನಾ ಕೊಲೆಯಾದವರು. 10 ಕ್ಕೂ ಅಧಿಕ ಮಂದಿ ಇದ್ದ ದುಷ್ಕರ್ಮಿಗಳ ಗುಂಪು ಮನೆಗೆ ನುಗ್ಗಿದ್ದು, ಲಕ್ಷ್ಮಿದತ್ತ ಮೇಲೆ ಹಲ್ಲೆ ನಡೆಸಿದೆ.

ದುಷ್ಕರ್ಮಿಗಳಿಂದ ಪಾರಾಗುವ ಪ್ರಯತ್ನದಲ್ಲಿ ಅವರು ಮನೆಯಿಂದ ಹೊರಗೆ ಬಂದಿದ್ದು, ಅವರನ್ನು ಬೆನ್ನಟ್ಟಿದ ದುಷ್ಕರ್ಮಿಗಳು ನಡುರಸ್ತೆಯಲ್ಲೇ ಕೊಚ್ಚಿ ಹಾಕಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ ಲಕ್ಷ್ಮಿದತ್ತ ಅವರನ್ನು ಬೆಹ್ರಾಂಪುರದ ಎಂ.ಕೆ.ಸಿ.ಜಿ. ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ರಾಜಕೀಯ ಕಾರಣದಿಂದ ಹತ್ಯೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಅವರ ಸಹೋದರ ದೇವಿದತ್ ಪ್ರಧಾನ್ ಈ ಕುರಿತು ಮಾಹಿತಿ ನೀಡಿದ್ದು, ಭಾಸ್ಕರ್, ಸೇಥಿ, ಕಲಿಯಾ, ಕುನಾ ಸೇರಿದಂತೆ 10 ಮಂದಿ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಹಂತಕರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...