alex Certify
ಕನ್ನಡ ದುನಿಯಾ       Mobile App
       

Kannada Duniya

ನಟೋರಿಯಸ್ ‘ಸ್ನೇಕ್ ಗ್ಯಾಂಗ್’ ಸದಸ್ಯರಿಗೆ ಜೀವಾವಧಿ ಶಿಕ್ಷೆ

final-judgement 4569ನಿರ್ಜನ ಪ್ರದೇಶದಲ್ಲಿ ಕುಳಿತಿರುತ್ತಿದ್ದ ಪ್ರೇಮಿಗಳಿಗೆ ವಿಷಪೂರಿತ ಹಾವನ್ನು ತೋರಿಸಿ ಬೆದರಿಕೆ ಹಾಕಿ ಹಣ, ಆಭರಣ ದೋಚುತ್ತಿದ್ದುದ್ದಲ್ಲದೇ ಯುವತಿಯರ ಮೇಲೆ ಅತ್ಯಾಚಾರವೆಸುತ್ತಿದ್ದ ಕುಖ್ಯಾತ ‘ಸ್ನೇಕ್ ಗ್ಯಾಂಗ್’ ನ ಏಳು ಮಂದಿಗೆ ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಪರಾಧಿಗಳಾದ ಫೈಸಲ್ ದಯ್ಯಾನಿ, ಖಾದರ್, ತಯ್ಯೆಬ್, ಮಹಮ್ಮದ್ ಪರ್ವೇಜ್, ಸಯ್ಯದ್ ಅನ್ವರ್, ಖಾಜಾ ಅಹ್ಮದ್ ಮತ್ತು ಮಹಮ್ಮದ್ ಇಬ್ರಾಹಿಂ ಜೀವಾವಧಿ ಶಿಕ್ಷೆಗೊಳಗಾಗಿದ್ದರೆ ಇದೇ ಗ್ಯಾಂಗಿನ ಸದಸ್ಯ ಆಲಿ ಎಂಬಾತನಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಸಲಾಂ ಹಮ್ದಿ ಎಂಬಾತನನ್ನು ಬಿಡುಗಡೆಗೊಳಿಸಲಾಗಿದೆ.

ಆಂಧ್ರ ಪ್ರದೇಶವನ್ನೇ ಬೆಚ್ಚಿ ಬೀಳಿಸಿದ್ದ ಈ ಸ್ನೇಕ್ ಗ್ಯಾಂಗ್ ತಂಡದವರು ಹಲವಾರು ಮಂದಿ ಯುವತಿಯರ ಮೇಲೆ ಅತ್ಯಾಚಾರವೆಸಗಿದ್ದರೆಂದು ಹೇಳಲಾಗಿತ್ತು. ಅವರುಗಳನ್ನು ಬೆದರಿಸಲು ವಿಷಪೂರಿತ ಹಾವನ್ನು ಬಳಸುತ್ತಿದ್ದ ಕಾರಣ ಈ ತಂಡಕ್ಕೆ ‘ಸ್ನೇಕ್ ಗ್ಯಾಂಗ್’ ಎಂದು ಹೆಸರಿಸಲಾಗಿತ್ತು. ಹೈದರಾಬಾದ್ ಹೊರ ವಲಯದ ಪಹಡಿ ಷರೀಫ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಠಿಕಾಣಿ ಹಾಕುತ್ತಿದ್ದ ಈ ತಂಡ ನಿರ್ಜನ ಪ್ರದೇಶದಲ್ಲಿ ತಮಗೆ ಸಿಕ್ಕವರನ್ನು ದೋಚುತ್ತಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...