alex Certify
ಕನ್ನಡ ದುನಿಯಾ       Mobile App
       

Kannada Duniya

43 ಸಹೋದ್ಯೋಗಿಗಳ ವಿರುದ್ಧ ಕಿರುಕುಳದ ದೂರು ದಾಖಲಿಸಿದ್ಲು ಎಂಜಿನಿಯರ್ ಮಹಿಳೆ

ನೋಯ್ಡಾದ ಸೆಕ್ಟರ್ 62ರಲ್ಲಿರುವ ಖಾಸಗಿ ಕಂಪನಿಯೊಂದರ ಮಹಿಳಾ ಉದ್ಯೋಗಿ 43 ಜನರ ವಿರುದ್ಧ ಕಿರುಕುಳದ ದೂರು ದಾಖಲಿಸಿದ್ದಾಳೆ. ತವಂತ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುವ ಎಂಜಿನಿಯರ್ ಮಹಿಳೆ ಸೆಕ್ಟರ್ 58ರಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 20 ಜನರ ಹೆಸರು ಬರೆದಿದ್ದು, 23 ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾಳೆ.

ಮಹಿಳೆ ಪ್ರಕಾರ, ಕಂಪನಿಯಲ್ಲಿ ಕೆಲಸ ಮಾಡುವ 20 ಮಂದಿ ಪ್ರತಿದಿನ ಅಶ್ಲೀಲ ಪದ ಬಳಕೆ ಜೊತೆ ಕಿರುಕುಳ ನೀಡ್ತಾರಂತೆ. 2016ರಲ್ಲಿ ಮಹಿಳೆ ಈ ಕಂಪನಿಗೆ ಸೇರಿದ್ದಳಂತೆ. 2017ರಲ್ಲಿ ಸಿಬ್ಬಂದಿ ವಾಟ್ಸ್ ಅಪ್ ಗ್ರೂಪ್ ಮಾಡಿಕೊಂಡಿದ್ದಾರಂತೆ. ಅದ್ರಲ್ಲಿ ಮಹಿಳೆಗೆ ಅಶ್ಲೀಲ ಸಂದೇಶ ರವಾನೆ ಮಾಡ್ತಾರಂತೆ.

ಮಹಿಳೆ ನೆನಪಿರುವ 20 ಮಂದಿ ಹೆಸರನ್ನು ಹೇಳಿದ್ದಾಳೆ. ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ್ದಾರೆ. ಈವರೆಗೆ ಯಾವುದೇ ವ್ಯಕ್ತಿಯನ್ನು ಬಂಧಿಸಿಲ್ಲ. ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ಕಂಪನಿ ಸಿಬ್ಬಂದಿ ನಿರಾಕರಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...