alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಮೇಲೆ ನಡೆದಿದ್ದು ಗ್ಯಾಂಗ್ ರೇಪ್ ಅಲ್ಲ…!?

download-1

ನೋಯ್ಡಾದಲ್ಲಿ ವೇಶ್ಯಾವಾಟಿಕೆ ದಂಧೆ ಹೆಚ್ಚಾಗ್ತಿದೆ. ಈ ಮೊದಲು ಹೊಟೇಲ್, ಅಪಾರ್ಟ್ಮೆಂಟ್ ಗಳಲ್ಲಿ ನಡೆಯುತ್ತಿತ್ತು. ಆದ್ರೀಗ ಕಾರ್ ನಲ್ಲಿ ಈ ದಂಧೆ ನಡೆಸಲಾಗ್ತಿದೆ. ನೋಯ್ಡಾ ಪೊಲೀಸರು ಮತ್ತೊಂದು ಪ್ರಕರಣ ಬಯಲಿಗೆಳೆದಿದ್ದಾರೆ. ಕಾರ್ ನಲ್ಲಿ ಮಹಿಳೆ ಜೊತೆ ಸಂಬಂಧ ಬೆಳೆಸಿದ ನಾಲ್ಕು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದ್ರಲ್ಲಿ ಮೂವರು ಹುಡುಗಿಯರನ್ನು ಸಪ್ಲೈ ಮಾಡುವವರಾಗಿದ್ದಾರೆ.

ನೋಯ್ಡಾ ಪೊಲೀಸರಿಗೆ ಫೋನ್ ಮಾಡಿದ ಯುವತಿಯೊಬ್ಬಳು ತನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ದೂರಿದ್ದಾಳೆ. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ. ಇದು ಗ್ಯಾಂಗ್ ರೇಪ್ ಅಲ್ಲ ವೇಶ್ಯಾವಾಟಿಕೆ ದಂಧೆ ಎಂಬುದು ತಿಳಿದುಬಂದಿದೆ.

ನೋಯ್ಡಾದ ನಾಲ್ಕು ಮಂದಿ ದೆಹಲಿಯ ಹುಡುಗಿಯನ್ನು 6 ಸಾವಿರ ರೂಪಾಯಿ ನೀಡುವುದಾಗಿ ಹೇಳಿ ಕರೆಯಿಸಿಕೊಂಡಿದ್ದಾರೆ. ಕಾರ್ ನಲ್ಲಿ ದಲ್ಲಾಳಿ ಹುಡುಗಿಯನ್ನು ಕರೆ ತಂದಿದ್ದಾನೆ. ತಮ್ಮ ಕೆಲಸ ಮುಗಿದ ಮೇಲೆ ಯುವತಿಯನ್ನು ದಾರಿ ಮಧ್ಯೆ ಬಿಟ್ಟು  1500 ರೂಪಾಯಿ ಮಾತ್ರ ನೀಡಿ ಹೋಗಿದ್ದಾರೆ. ಇದ್ರಿಂದ ಕಂಗಾಲಾದ ಯುವತಿ ದಲ್ಲಾಳಿಯನ್ನು ಕರೆದು ಮಾತನಾಡಿದ್ದಾಳೆ. ನಂತ್ರ ಪೊಲೀಸರಿಗೆ ಕರೆ ಮಾಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...