alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತ್ರ ನಿರ್ಮಾಪಕರಿಗೆ ಮಸಾಜ್ ಪಾರ್ಲರ್ ಒಡತಿ ಇಟ್ಲು ಇಂತ ಬೇಡಿಕೆ..!

0

ನೋಯ್ಡಾ ಮಸಾಜ್ ಪಾರ್ಲರ್ ಒಂದರ ಬಣ್ಣ ಬಯಲಾಗಿದೆ. ಸ್ಪಾನಲ್ಲಿ ದೇಹ ವ್ಯಾಪಾರ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಒಡತಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸೂಕ್ತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾಳೆ.

ಚಿತ್ರನಿರ್ಮಾಪಕರೊಬ್ಬರ ದೂರಿನ ಮೇರೆಗೆ ನೋಯ್ಡಾ ಸೆಕ್ಟರ್ -20 ಪೊಲೀಸ್ ಠಾಣೆ ಪೊಲೀಸರು ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿದ್ದಾರೆ. ಮುಂಬೈ ನಿವಾಸಿ ಚಿತ್ರ ನಿರ್ಮಾಪಕ ಕುಮಾರ್ ಪ್ರಸನ್ನಾ ಮೂನ್ ಸೈನ್ ಸ್ಪಾನಲ್ಲಿ ದೇಹ ವ್ಯಾಪಾರ ದಂಧೆ ನಡೆಯುತ್ತಿದೆ ಎಂದು ದೂರಿನಲ್ಲಿ ಹೇಳಿದ್ದರು. ನೋಯ್ಡಾ ಸೆಕ್ಟರ್ -18ನಲ್ಲಿರುವ ಸ್ಪಾಗೆ ಹೋಗಿದ್ದ ವೇಳೆ ಅಲ್ಲಿನ ಸ್ಪಾ ಒಡತಿ ಹಾಗೂ ಇಬ್ಬರು ಹುಡುಗಿಯರು ಶಾರೀರಿಕ ಸಂಬಂಧ ಬೆಳೆಸುವಂತೆ ಒತ್ತಡ ಹೇರಿದ್ದಾರೆಂದು ಆರೋಪ ಮಾಡಿದ್ದರು.

ಸ್ಪಾ ಒಡತಿ 5 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಳು ಎನ್ನಲಾಗಿದೆ. ಇದನ್ನು ನಿರಾಕರಿಸಿದ ನಿರ್ಮಾಪಕರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರಂತೆ. ದೂರು ದಾಖಲಿಸಿಕೊಂಡ ಪೊಲೀಸರು ಸ್ಪಾ ಒಡತಿ ಪೂಜಾ ಅಲಿಯಾಸ್ ಜೀವಾ ಹಾಗೂ ಇನ್ನೊಬ್ಬಳನ್ನು ಬಂಧಿಸಿದ್ದಾರೆ. ಸೋನು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...