alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ವೇಳೆಯೇ ಸಿಕ್ಕಿಬಿದ್ದ ಪುತ್ರಿಯಿಂದ ಘೋರ ಕೃತ್ಯ

ನೋಯ್ಡಾ: ಸರಸವಾಡುವಾಗ ನೋಡಿ ಬೈದಾಡಿದ್ದರಿಂದ ಆಕ್ರೋಶಗೊಂಡ ಪುತ್ರಿ, ಪ್ರಿಯಕರನೊಂದಿಗೆ ಸೇರಿ ತಂದೆಯನ್ನೇ ಕೊಲೆ ಮಾಡಿದ್ದಾಳೆ.

ನೋಯ್ಡಾದ ಅಟ್ಟಾ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಭಾನುವಾರ ಬೆಳಗಿನ ಜಾವ ಮನೆಯಲ್ಲಿ ಮಲಗಿದ್ದ ವಿಶ್ವನಾಥ್ ಅವರಿಗೆ ಪುತ್ರಿಯ ರೂಮ್ ನಿಂದ ಶಬ್ಧ ಬರುತ್ತಿರುವುದು ಕೇಳಿದೆ. ಅವರು ಎದ್ದು ಬಂದು ನೋಡಿದಾಗ, 19 ವರ್ಷದ ಪುತ್ರಿ ಪೂಜಾ ಆಕೆಯ ಪ್ರಿಯಕರ ಧರ್ಮೇಂದ್ರನ ಜೊತೆ ಸರಸವಾಡುತ್ತಿರುವ ದೃಶ್ಯ ಕಣ್ಣಿಗೆ ಬಿದ್ದಿದೆ.

ಇದರಿಂದ ಆಕ್ರೋಶಗೊಂಡ ವಿಶ್ವನಾಥ್ ಬೈದಾಡಿದ್ದಾರೆ. ಆಗ ಪೂಜಾ ಪ್ರಿಯಕರನೊಂದಿಗೆ ಸೇರಿ ತಂದೆಯ ಮೇಲೆ ಹಲ್ಲೆ ನಡೆಸಿ ಕಟ್ಟಡದಿಂದ ನೂಕಿದ್ದಾಳೆ.

ಗಂಭೀರವಾಗಿ ಗಾಯಗೊಂಡಿದ್ದ ವಿಶ್ವನಾಥ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ವಿಶ್ವನಾಥ್ ಪತ್ನಿ ಗಾಯತ್ರಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...