alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಠಾಣೆಯಲ್ಲೇ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ಗ್ರೇಟರ್ ನೋಯ್ಡಾದ ಪೊಲೀಸ್ ಔಟ್ ಪೋಸ್ಟ್ ಒಂದರಲ್ಲಿ ನಾಗರಿಕ ಸಮಾಜ ಬೆಚ್ಚಿ ಬೀಳುವಂತಹ ಘಟನೆ ನಡೆದಿದೆ. ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಪೇದೆಯೊಬ್ಬ ಮದ್ಯದ ಅಮಲಿನಲ್ಲಿ 6 ವರ್ಷದ ಬಾಲಕಿಯೊಬ್ಬಳನ್ನು ಪೊಲೀಸ್ ಔಟ್ ಪೋಸ್ಟ್ ಒಳಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಶನಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಶಾಲೆಗೆ ತೆರಳಲು ಯೂನಿಫಾರಂ ಧರಿಸಿ ತಯಾರಾಗಿದ್ದ ಬಾಲಕಿ ಸನಿಹದ ಅಂಗಡಿಯೊಂದರಿಂದ ತಿನಿಸು ತರಲು ಹೋಗಿದ್ದಾಳೆ. ಈ ಸಂದರ್ಭದಲ್ಲಿ ನರೇಂದ್ರ ಎಂಬ 48 ವರ್ಷದ ಪೊಲೀಸ್ ಪೇದೆ ಠಾಣೆಯಲ್ಲಿ ಒಬ್ಬನೇ ಇದ್ದು, ಬಾಲಕಿಯನ್ನು ಪುಸಲಾಯಿಸಿ ಒಳ ಕರೆದೊಯ್ದಿದ್ದಾನೆ.

ಕಂಠಪೂರ್ತಿ ಮದ್ಯ ಸೇವಿಸಿದ್ದ ಆತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಬೆದರಿದ ಬಾಲಕಿ ಹೇಗೋ ತಪ್ಪಿಸಿಕೊಂಡು ಮನೆಗೆ ಓಡಿದ್ದಾಳೆ. ಇಷ್ಟಾದರೂ ಬಿಡದ ಪೇದೆ ಬಾಲಕಿಯ ಬೆನ್ನಟ್ಟಿ ಹೋಗಿದ್ದು, ಅದೇ ಸಮಯದಲ್ಲಿ ರಿಕ್ಷಾ ಚಾಲಕನಾಗಿರುವ ಬಾಲಕಿಯ ತಂದೆ ಮನೆಗೆ ಬಂದಿದ್ದಾರೆ. ಬಾಲಕಿ ನಡೆದ ಸಂಗತಿಯನ್ನು ಅವರಿಗೆ ಹೇಳಿದ್ದು, ಪೇದೆಯನ್ನು ಹಿಡಿಯಲು ಹೋದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಪೊಲೀಸ್ ಪೇದೆಯ ಕೃತ್ಯದ ಮಾಹಿತಿ ಕ್ಷಣಮಾತ್ರದಲ್ಲಿ ಬಹಿರಂಗವಾಗಿದ್ದು, ಆಕ್ರೋಶಗೊಂಡ ನೂರಾರು ಮಂದಿ ಸ್ಥಳೀಯರು ಠಾಣೆ ಮುಂದೆ ಜಮಾಯಿಸಿ ಪೇದೆ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕೆಲ ಸಮಯದಲ್ಲೇ ಪೇದೆಯನ್ನು ಬಂಧಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ವೇಳೆ ಆತ ಮಿತಿಮೀರಿ ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ. ಆತನನ್ನು ತಕ್ಷಣದಿಂದಲೇ ಕೆಲಸದಿಂದ ವಜಾಗೊಳಿಸಿದ್ದು, ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...