alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ಭಯಾ ಪ್ರಕರಣ ನೆನಪಿಸಿದ ಅಮಾನವೀಯ ಕೃತ್ಯ

dead-bod

ಚಂಡೀಗಢ: 80 ವರ್ಷದ ವೃದ್ಧೆಯೊಬ್ಬರ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಿ, ಭೀಕರವಾಗಿ ಹತ್ಯೆ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ.

ಸೋನಿಪತ್ ಜಿಲ್ಲೆಯ ಬಾತ್ ಗಾಂವ್ ಗ್ರಾಮದಲ್ಲಿ ವೃದ್ಧೆಯ ಖಾಸಗಿ ಅಂಗಕ್ಕೆ ಹಾರ್ಪಿಕ್ ಬಾಟಲಿ ತುರುಕಿದ್ದು, ತೀವ್ರ  ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.

ಹಾರ್ಪಿಕ್ ಬಾಟಲಿ ತುರುಕಿದ್ದರಿಂದ ವೃದ್ಧೆಯ ಕರುಳಿಗೆ ಹಾನಿಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಇದು ನಿರ್ಭಯಾ ಪ್ರಕರಣ ನೆನಪಿಸುವಂತಿದೆ ಎಂದು ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

2015 ರ ಫೆಬ್ರವರಿಯಲ್ಲಿ ಹರಿಯಾಣದಲ್ಲಿ ನೇಪಾಳಿ ಮಹಿಳೆಯೊಬ್ಬರ ಗುಪ್ತಾಂಗಕ್ಕೆ ಕಾಂಡೊಮ್,  ಕೋಲು ತುರುಕಿ ಹತ್ಯೆ ಮಾಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...