alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯಾವಾಟಿಕೆಗೆ ಒಪ್ಪದ ಯುವತಿ ಮೇಲೆ ನೀಚ ಕೃತ್ಯ

rape klop

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ನೈಜಿರಿಯಾ ಯುವತಿಯೊಬ್ಬಳು, ಮದ್ಯದ ಅಮಲಿನಲ್ಲಿ ಪುಂಡಾಟ ನಡೆಸಿದ ಘಟನೆ ಮರೆಯಾಗುವ ಮೊದಲೇ, ನೈಜಿರಿಯಾ ಯುವಕರ ಪುಂಡಾಟಿಕೆ ಬೆಳಕಿಗೆ ಬಂದಿದೆ. ತಡರಾತ್ರಿ ಯುವತಿಯ ಮೇಲೆ ಹಲ್ಲೆ ಮಾಡಿದ ನೈಜಿರಿಯಾ ಯುವಕರು 3ನೇ ಮಹಡಿಯಿಂದ ಕೆಳಕ್ಕೆ ನೂಕಿದ್ದಾರೆ.

ಆಫ್ರಿಕಾ ಖಂಡದ ನೈಜಿರಿಯಾ ಮತ್ತು ಉಗಾಂಡ ದೇಶದ ಹಲವರು ಭಾರತದಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿದ್ದ ನೈಜಿರಿಯಾದ ಮೂವರು ಯುವಕರಿಗೆ, ಮುಂಬೈನಲ್ಲಿದ್ದ ಉಗಾಂಡದ ಯುವತಿ ಫಜಿಯಾ ಪರಿಚಯವಾಗಿದ್ದು, ಆಕೆಗೆ ಕೆಲಸ ಕೊಡಿಸುವುದಾಗಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಒಂದೆರಡು ದಿನ ಆಕೆಯನ್ನು ಮನೆಯಲ್ಲಿಟ್ಟುಕೊಂಡು, ತಡರಾತ್ರಿ ಆಕೆಯನ್ನು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಲು ಪ್ರಯತ್ನಿಸಿದ್ದು, ಒಪ್ಪದಿದ್ದಾಗ, ಮೂವರೂ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

ಆಕೆ ಹೊರಗೆ ಓಡಿ ಬಂದಿದ್ದು, ಮಹಡಿ ಮೇಲಿನಿಂದ ಕೆಳಕ್ಕೆ ನೂಕಿದ್ದಾರೆ ಎನ್ನಲಾಗಿದೆ. ಫಜಿಯಾ ಕಾಲು ಮುರಿದಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ, ಕೊತ್ತನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನೈಜಿರಿಯಾ ಮೂಲದ ಯುವಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...