alex Certify
ಕನ್ನಡ ದುನಿಯಾ       Mobile App
       

Kannada Duniya

ಪುರುಷ ಪೊಲೀಸ್ ಸಿಬ್ಬಂದಿ ಮುಂದೆ ಮಹಿಳೆಯನ್ನು ನಿರ್ವಸ್ತ್ರಗೊಳಿಸಿದ್ರು

ಛತ್ತೀಸ್ಗಢದ ಬಿಲಾಸ್ಪುರದ ಡಿಜಿಪಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನೋಟೀಸ್ ಜಾರಿ ಮಾಡಿದೆ. ಬಿಲಾಸ್ಪರದ ಪೊಲೀಸ್ ಠಾಣೆಯಲ್ಲಿ ವೃದ್ಧ ಮಹಿಳೆ ಹಾಗೂ ಆಕೆ ಮಗಳನ್ನು ಮಹಿಳಾ ಪೊಲೀಸ್ ಸಿಬ್ಬಂದಿ, ಪುರುಷ ಪೊಲೀಸ್ ಸಿಬ್ಬಂದಿ ಮುಂದೆಯೇ ನಿರ್ವಸ್ತ್ರಗೊಳಿಸಿದ್ದಾರೆ. ಜೊತೆಗೆ ಮಹಿಳೆ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಡಿಜಿಪಿಗೆ ನೋಟೀಸ್ ಜಾರಿಗೊಳಿಸಲಾಗಿದೆ.

ಇದೊಂದು ಅಮಾನವೀಯ ಹಾಗೂ ಅಸ್ವಾಭಾವಿಕ ಕ್ರಿಯೆ ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹೇಳಿದೆ. ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದ್ದು, ಇದ್ರ ಆಧಾರದ ಮೇಲೆ ನೋಟೀಸ್ ಜಾರಿಗೊಳಿಸಲಾಗಿದೆ. ಕಳ್ಳತನದ ಆರೋಪದ ಮೇಲೆ 60 ವರ್ಷದ ಮಹಿಳೆ ಹಾಗೂ 27 ವರ್ಷದ ಆಕೆ ಮಗಳನ್ನು ಬಂಧಿಸಲಾಗಿತ್ತು.

ಅಕ್ಟೋಬರ್ 14ರಂದು ಘಟನೆ ನಡೆದಿದೆ. ಪುರುಷ ಪೊಲೀಸ್ ಸಿಬ್ಬಂದಿ ಮುಂದೆಯೇ ಮಹಿಳೆ ಹಾಗೂ ಮಗಳನ್ನು ನಿರ್ವಸ್ತ್ರಗೊಳಿಸಲಾಗಿದೆ. ಮಹಿಳೆ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಹೊಡೆಯದಂತೆ ಪೊಲೀಸರಿಗೆ ಮನವಿ ಮಾಡಿದ್ದಾಳೆ. ಆದ್ರೆ ಪೊಲೀಸರ ಮನಸ್ಸು ಕರಗಲಿಲ್ಲವಂತೆ. ಮನಸ್ಸಿಗೆ ಬಂದಂತೆ ಮಹಿಳೆ ಹಾಗೂ ಮಗಳನ್ನು ಥಳಿಸಿದ್ದಾರೆ. ಘಟನೆಯಲ್ಲಿ ಮಹಿಳೆಗೆ ಗಾಯವಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದೆ. ಇದಾದ ನಂತ್ರ ಸೋಮವಾರ ಮಾನವ ಹಕ್ಕು ಆಯೋಗ ನೋಟೀಸ್ ಜಾರಿಗೊಳಿಸಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...