alex Certify
ಕನ್ನಡ ದುನಿಯಾ       Mobile App
       

Kannada Duniya

ನವ ವಿವಾಹಿತೆ ಮೇಲೆ ಪತಿ ಮತ್ತಾತನ ಸ್ನೇಹಿತರಿಂದಲೇ ರೇಪ್

ಆಸ್ಸಾಂನಲ್ಲಿ ಮಾನವ ಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ವಿವಾಹ ಸಂದರ್ಭದಲ್ಲಿ ಪತ್ನಿ ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ಪಾಪಿ ಪತಿಯೊಬ್ಬ ಮದುವೆಯಾದ ಮೂರು ದಿನದಲ್ಲೇ ತನ್ನ ಅಸಲಿಯತ್ತು ತೋರಿಸಿದ್ದಾನೆ. ಸ್ನೇಹಿತರೊಂದಿಗೆ ಸೇರಿ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ದಕ್ಷಿಣ ಅಸ್ಸಾಂ ನ ಕರೀಂ ಗಂಜ್ ಜಿಲ್ಲೆಯಲ್ಲಿ ಈ ಘಟನೆ ಏಪ್ರಿಲ್ 17 ರಂದು ನಡೆದಿದ್ದು, ಪತಿ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಪತ್ನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ ನವ ವಿವಾಹಿತೆ ಚಿಕಿತ್ಸೆಗೆಂದು ಕರೀಂ ಗಂಜ್ ಸರ್ಕಾರಿ ಆಸ್ಪತ್ರೆಗೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ.

ಮಹಿಳೆಯ ವಿಚಾರಣೆ ವೇಳೆ ವಿವಾಹ ಸಂದರ್ಭದಲ್ಲಿ ನಗದು, ಚಿನ್ನ ನೀಡಲಿಲ್ಲವೆಂಬ ಕಾರಣಕ್ಕೆ ಪತಿ ಮತ್ತಾತನ ಸ್ನೇಹಿತರು ಈ ಕೃತ್ಯವೆಸಗಿರುವುದಾಗಿ ಹೇಳಿಕೆ ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾಪಿ ಪತಿಯನ್ನು ಬಂಧಿಸಿದ್ದು, ಪರಾರಿಯಾಗಿರುವ ಆತನ ಇಬ್ಬರು ಸ್ನೇಹಿತರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...