alex Certify
ಕನ್ನಡ ದುನಿಯಾ       Mobile App
       

Kannada Duniya

ನೌಕರಿ ಅರಸಿ ಬಂದ ಯುವತಿಗೆ ಮ್ಯಾನೇಜರ್ ಹೇಳಿದ್ದೇನು..?

30_09_2016-younggirl

ನೌಕರಿ ಹೆಸರಲ್ಲಿ ನಿರಂತರವಾಗಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿದೆ. ಫರೀದಾಬಾದ್ ನಲ್ಲಿ ಕೆಲಸ ಕೊಡುವುದಾಗಿ ಹೇಳಿದ ಮ್ಯಾನೇಜರ್ ಒಬ್ಬ, ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಟಾಪ್ ಲೆಸ್ ಆದ್ರೆ 30 ಸಾವಿರ ಸಂಬಳ ನೀಡಿ ನೌಕರಿ ನೀಡುತ್ತೇನೆ ಎಂದು ಮ್ಯಾನೇಜರ್ ಯುವತಿಗೆ ಹೇಳಿದ್ದಾನೆ. ಬೆದರಿದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಘಟನೆ ನಡೆದಿರುವುದು ನೀಲಂ ಚೌಕ್ ನ ಕಾರ್ ಶೋ ರೂಂ ಒಂದರಲ್ಲಿ. 21 ವರ್ಷದ ಯುವತಿಯೊಬ್ಬಳು ನೌಕರಿಗಾಗಿ ಅಲ್ಲಿಗೆ ಬಂದಿದ್ದಾಳೆ. ಸಂದರ್ಶನ ನಡೆಸಿದ ಮ್ಯಾನೇಜರ್, ಹುಡುಗಿ ಜೊತೆ ಕೆಟ್ಟದಾಗಿ ಮಾತನಾಡಿದನಂತೆ. ಅಶ್ಲೀಲ ಮಾತುಗಳನ್ನಾಡ್ತಾ ಇದ್ದ ಮ್ಯಾನೇಜರ್ ನನ್ನು ಮೊದಲು ಯುವತಿ ಗಂಭೀರವಾಗಿ ಪರಿಗಣಿಸಿಲ್ಲ. ಆದ್ರೆ ಮಿತಿ ಮೀರಿದ ಮ್ಯಾನೇಜರ್ 30 ಸಾವಿರ ಸಂಬಳ ಕೊಡ್ತೇನೆ. ಒಮ್ಮೆ ಟಾಪ್ ಲೆಸ್ ಆಗು ಎಂದಿದ್ದಾನಂತೆ. ಇದರಿಂದ ಆತಂಕಗೊಂಡ ಯುವತಿ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಮನೆಗೆ ಬಂದಿದ್ದಾಳಂತೆ.

ಮನೆಯವರ ನೆರವಿನಿಂದ ಯುವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಆದ್ರೆ ನನಗೆ ಮುಖ್ಯಮಂತ್ರಿಯವರೆಗೆ ಗೊತ್ತು. ನೀನೇನೂ ಮಾಡಲು ಸಾಧ್ಯವಿಲ್ಲವೆಂದು ಬೆದರಿಕೆ ಹಾಕಿದ್ದಾನಂತೆ ಮ್ಯಾನೇಜರ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...