alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡು ಬ್ಯಾಗ್ ನಲ್ಲಿದ್ದ ವಸ್ತು ನೋಡಿ ಕಂಗಾಲಾದ್ರು ಪೊಲೀಸ್

bag_dead_body__1501937504_618x347

ದೆಹಲಿಯ ನಜಫ್ಗಢದಲ್ಲಿ ಸಿಕ್ಕ ಎರಡು ಬ್ಯಾಗ್ ಒಳಗಿದ್ದ ವಸ್ತು ನೋಡಿ ಪೊಲೀಸರೇ ಹೌಹಾರಿದ್ದಾರೆ. ಬ್ಯಾಗ್ ತೆಗೆಯುತ್ತಿದ್ದಂತೆ ವ್ಯಕ್ತಿಯೊಬ್ಬನ ಕಾಲು, ಕೈ, ತಲೆ ಎಲ್ಲ ಸಿಕ್ಕಿದೆ. ಒಂದು ಬ್ಯಾಗ್ ನಲ್ಲಿ ತಲೆಯಿದ್ರೆ ಇನ್ನೊಂದು ಬ್ಯಾಗ್ ನಲ್ಲಿ ಕಾಲು, ಕೈ ತುಂಬಲಾಗಿತ್ತು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು ತನಿಖೆ ಶುರುಮಾಡಿದ್ದಾರೆ.

ಶನಿವಾರ ನಜಫ್ಗಢ ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದ ಎರಡು ಕೆಂಪು ಬ್ಯಾಗ್ ನೋಡಿದ್ದಾರೆ ಸ್ಥಳೀಯರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬ್ಯಾಗ್ ಒಳಗಿದ್ದ ಹೆಣ ನೋಡಿ ಕಂಗಾಲಾಗಿದ್ದಾರೆ. ಶುಕ್ರವಾರ ರಾತ್ರಿ ಕೊಲೆ ಮಾಡಿ ಬ್ಯಾಗ್ ನಲ್ಲಿ ತುಂಬಿ ಇಲ್ಲಿ ಎಸೆದು ಹೋಗಲಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸ್ವಯಂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...