alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯೊಂದಿಗೆ ಸಂಸಾರ ಮಾಡಲ್ಲವೆಂದ ಮಗಳು, ನಡೀತು ಮರ್ಯಾದೆಗೇಡು ಹತ್ಯೆ

ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ಸಮೀಪದ ಸಾಗರೆ ಗ್ರಾಮದಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

19 ವರ್ಷದ ಯುವತಿಯನ್ನು ಆಕೆಯ ತಂದೆ ಪ್ರಕಾಶ್, ಪ್ರಕಾಶ್ ಸಹೋದರ ಗೋವಿಂದರಾಜು ಹಾಗೂ ಅವರ ಮೂವರು ಸಹಚರರು ಕೊಲೆ ಮಾಡಿ ಮೃತದೇಹವನ್ನು ಸುಟ್ಟುಹಾಕಿದ್ದಾರೆ.

ಗ್ರಾಮದಲ್ಲಿ ಯುವತಿಯ ಕುರಿತಾಗಿ ಸುದ್ದಿಗಳು ಹರಿದಾಡಿ ಸರಗೂರು ಪೊಲೀಸರಿಗೆ ಮಾಹಿತಿ ಗೊತ್ತಾಗಿದೆ. ಪೊಲೀಸರು ಯುವತಿಯ ತಂದೆ ಪ್ರಕಾಶ್ ನನ್ನು ವಿಚಾರಣೆಗೆ ಒಳಪಡಿಸಿದಾಗ, ಹತ್ಯೆಯ ವಿಷಯ ಬೆಳಕಿಗೆ ಬಂದಿದೆ.

15 ದಿನಗಳ ಹಿಂದೆ ಯುವತಿಯನ್ನು ಸೋನಹಳ್ಳಿಯ ಯುವಕನೊಂದಿಗೆ ಮದುವೆ ಮಾಡಲಾಗಿದೆ. ವಾರದಲ್ಲೇ ಗಂಡನ ಮನೆಯವರಿಗೆ ಬೇರೆ ಯುವಕನನ್ನು ಪ್ರೀತಿಸಿರುವುದಾಗಿ ತಿಳಿಸಿದ ಯುವತಿ, ಆತನೊಂದಿಗೇ ಹೋಗುವುದಾಗಿ ಹೇಳಿದ್ದಾಳೆ. ಪತಿಯೊಂದಿಗೆ ಜಗಳವಾಡಿ ಪ್ರೀತಿಸಿದ ಯುವಕನೊಂದಿಗೆ ಕಳಿಸುವಂತೆ ಬಲವಂತ ಮಾಡಿದ್ದಾಳೆ.

ಈ ಮಾಹಿತಿ ತಿಳಿದು ಅಲ್ಲಿಗೆ ತೆರಳಿದ ಪ್ರಕಾಶ್, ಪಂಚಾಯಿತಿ ನಡೆಸಿದ್ದು, ಒಪ್ಪದಿದ್ದಾಗ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.

ಬಳಿಕ ಕಪಿಲಾ ನದಿ ಬಳಿ ಆಕೆಯನ್ನು ಕರೆದೊಯ್ದು ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಹಾಕಿದ್ದಾರೆ. ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರು ನಾಪತ್ತೆಯಾಗಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...