alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಲೆ ರಹಸ್ಯವನ್ನು ಬಿಚ್ಚಿಟ್ಟಿದೆ ಮಟನ್ ಸೂಪ್..!

ತೆಲಂಗಾಣದಲ್ಲಿ ಗಂಡನನ್ನೇ ಕೊಂದು ನಾಟಕವಾಡಿದ್ದ ಮಹಿಳೆ ಮಟನ್ ಸೂಪ್ ನಿಂದಾಗಿ ಸಿಕ್ಕಿಬಿದ್ದಿದ್ದಾಳೆ. ನಾಗಕುರ್ನೂಲ್ ನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿರೋ 27 ವರ್ಷದ ಸ್ವಾತಿ, ಸುಧಾಕರ ರೆಡ್ಡಿಯನ್ನು ಮದುವೆಯಾಗಿದ್ಲು. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ.

ಆದ್ರೆ ಸ್ವಾತಿ ಫಿಸಿಯೋಥೆರಪಿಸ್ಟ್ ಆಗಿದ್ದ ರಾಜೇಶ್ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ಲು. ಇಬ್ಬರೂ ಸೇರಿ ಸುಧಾಕರ ರೆಡ್ಡಿಯನ್ನು ಕೊಂದು, ಅವನ ಆಸ್ತಿ ಕಬಳಿಸಲು ಪ್ಲಾನ್ ಮಾಡಿದ್ದಾರೆ. ನವೆಂಬರ್ 27ರಂದು ರೆಡ್ಡಿಗೆ ಅನಸ್ತೇಶಿಯಾ ಕೊಟ್ಟು, ನಂತರ ತಲೆಗೆ ಹೊಡೆದು ಕೊಂದಿದ್ದಾರೆ.

ಮೃತದೇಹವನ್ನು ಕಾಡಿನಲ್ಲಿ ಸುಟ್ಟು ಹಾಕಿದ್ದಾರೆ. ನಂತರ ರಾಜೇಶ್ ನ ಮುಖಕ್ಕೆ ಆ್ಯಸಿಡ್ ಹಾಕಿದ ಸ್ವಾತಿ, ಯಾರೋ ಕಿಡಿಗೇಡಿಗಳು ತನ್ನ ಗಂಡನ ಮುಖಕ್ಕೆ ಆ್ಯಸಿಡ್ ಹಾಕಿದ್ದಾರೆಂದು ನಾಟಕವಾಡಿದ್ಲು. ರಾಜೇಶ್ ಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಅವನೇ ನನ್ನ ಗಂಡನೆಂದು ಸುಳ್ಳು ಹೇಳೋದು ಅವಳ ಸ್ಕೆಚ್ ಆಗಿತ್ತು.

ಸುಟ್ಟ ಗಾಯಗಳಿಂದ ಬಳಲುತ್ತಿದ್ದ ರಾಜೇಶ್ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ರೋಗಿಗಳಿಗೆಲ್ಲ ಮಟನ್ ಸೂಪ್ ಕೊಡಲಾಗಿತ್ತು. ಅದನ್ನು ಸೇವಿಸಲು ನಿರಾಕರಿಸಿದ ರಾಜೇಶ್, ತಾನು ಸಸ್ಯಾಹಾರಿ ಅಂತಾ ಹೇಳಿದ. ಇದನ್ನು ಗಮನಿಸಿದ ಸಂಬಂಧಿಕರಿಗೆ ಅನುಮಾನ ಬಂದಿತ್ತು.

ಯಾಕಂದ್ರೆ ಸುಧಾಕರ ರೆಡ್ಡಿ ಪಕ್ಕಾ ಮಾಂಸಾಹಾರಿಯಾಗಿದ್ದ. ಅನುಮಾನ ಬಂದ ಅವರು ಸಂಬಂಧಿಕರನ್ನೆಲ್ಲ ಗುರುತಿಸುವಂತೆ ಸೂಚಿಸಿದ್ದಾರೆ. ಆಗ ಸಿಕ್ಕಿಬೀಳಬಹುದು ಅನ್ನೋ ಭಯದಲ್ಲಿ ರಾಜೇಶ್ ಮಾತೇ ಬರುತ್ತಿಲ್ಲ ಎಂಬಂತೆ ನಾಟಕವಾಡಿದ್ದ, ಸನ್ನೆ ಮಾಡಲು ಶುರು ಮಾಡಿದ್ದ.

ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಲಾಯ್ತು. ಸ್ವಾತಿಯನ್ನು ವಿಚಾರಣೆ ನಡೆಸಿದಾಗ ಆಕೆ ಪತಿಯನ್ನು ಕೊಲೆ ಮಾಡಿ, ರಾಜೇಶ್ ನನ್ನೇ ತನ್ನ ಗಂಡನಂತೆ ಬಿಂಬಿಸಲು ಮಾಡಿದ್ದ ಪ್ಲಾನ್ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಆಕೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ರಾಜೇಶ್ ನನ್ನು ಕೂಡ ಬಂಧಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...