alex Certify
ಕನ್ನಡ ದುನಿಯಾ       Mobile App
       

Kannada Duniya

“ನಾನು ಆಕೆಯನ್ನು ಕೊಲೆ ಮಾಡ್ದೆ….’’

ಪತಿಯ ಆಯಸ್ಸು ವೃದ್ಧಿಗಾಗಿ ಆಕೆ ಕರವಾಚೌತ್ ವೃತ ಮಾಡಿದ್ದಳು. ಮರುದಿನ ಪತಿ-ಪತ್ನಿ ನಡುವೆ ಜಗಳ ನಡೆದಿದೆ. ಬುಧವಾರ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ ಪತಿ ಪೊಲೀಸರಿಗೆ ಕರೆ ಮಾಡಿ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಎಲ್ಲ ಗಲಾಟೆ, ಸಾವಿಗೆ ಕಾರಣವಾಗಿದ್ದು ಪತ್ನಿಯ ಬಾಯ್ ಫ್ರೆಂಡ್.

ಘಟನೆ ನಡೆದಿರುವುದು ಗ್ವಾಲಿಯರ್ ನಲ್ಲಿ. ರಾಮಶಂಕರ್ ಪತ್ನಿ ಸಂಗೀತಾ ಹಾಗೂ ಮಗಳ ಜೊತೆ ಫ್ಲಾಟ್ ಒಂದರಲ್ಲಿ ವಾಸವಾಗಿದ್ದ. ಆತನ ಇನ್ನಿಬ್ಬರು ಮಕ್ಕಳು ಹಳ್ಳಿಯಲ್ಲಿ ಅಜ್ಜನ ಜೊತೆಗಿದ್ದಾರೆ. ಭಾನುವಾರ ಸಂಗೀತಾ ಕರವಾಚೌತ್ ವೃತ ಮಾಡಿದ್ದಾರೆ. ಸೋಮವಾರ ರಾತ್ರಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.

ಪತ್ನಿ ಸಂಗೀತಾ ಇನ್ನೊಬ್ಬನ ಜೊತೆ ಸಂಬಂಧ ಬೆಳೆಸಿದ್ದಾಳೆಂದು ರಾಮಶಂಕರ್ ಆರೋಪಿಸಿದ್ದಾನೆ. ಇದ್ರಿಂದ ಕೋಪಗೊಂಡ ಸಂಗೀತಾ ಬಿಸಿ ನೀರನ್ನು ರಾಮಶಂಕರ್ ಮೈಗೆ ಎರಚಿ ಮನೆಯಿಂದ ಹೊರ ಹೋಗಲು ನೋಡಿದ್ದಾಳೆ. ರಾಮಶಂಕರ್ ಪತ್ನಿಯನ್ನು ಕೂಡಿ ಹಾಕಿದ್ದಾನೆ. ಬುಧವಾರ ಮತ್ತೆ ಗಲಾಟೆ ಶುರುವಾಗಿದೆ. ನನ್ನ ಬಾಯ್ ಫ್ರೆಂಡ್ ಬಳಿ ಹೋಗ್ತಿದ್ದೇನೆ. ನಿನಗೆ ತಕ್ಕ ಶಾಸ್ತಿ ಮಾಡ್ತೇನೆಂದು ಸಂಗೀತಾ ಹೇಳಿದ್ದಾಳೆ. ಇದ್ರಿಂದ ಕೋಪಗೊಂಡ ರಾಮಶಂಕರ್ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. 100ಕ್ಕೆ ಡಯಲ್ ಮಾಡಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...