alex Certify
ಕನ್ನಡ ದುನಿಯಾ       Mobile App
       

Kannada Duniya

ಸತ್ತ ನಂತ್ರ ಫೇಸ್ಬುಕ್ ನಲ್ಲಿ ಕೊಲೆಗಡುಕನ ಫೋಟೋ ಅಪ್ ಲೋಡ್ ಮಾಡಿದ ಹುಡುಗಿ…!

woman-and-boyfriend-1

ಸತ್ತ ನಂತ್ರ ಕೊಲೆ ಮಾಡಿದವರು ಯಾರು ಅಂತಾ ಹೇಳೋದು ಅಸಾಧ್ಯ. ಆದ್ರೆ ಸತ್ತ ನಂತರ ತನ್ನ ಕೊಲೆ ಮಾಡಿದ ವ್ಯಕ್ತಿಯ ಫೋಟೋವನ್ನು ಹುಡುಗಿಯೊಬ್ಬಳು ಫೇಸ್ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾಳೆ.

ಜೋಯಿ ಮರ್ಕ್ಯಾಡೋ ಎಂಬ ಹುಡುಗಿ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದಾಳೆ. ಆದ್ರೆ ಆಕೆ ಹೆಸರಿನ ಫೇಸ್ಬುಕ್ ಪೇಜ್ ನಲ್ಲಿ ಬಾಯ್ ಫ್ರೆಂಡ್ ಜೊತೆ ಆಕೆ ಇರುವ ಫೋಟೋವೊಂದು ಅಪ್ ಲೋಡ್ ಆಗಿದೆ. ಅದ್ರಲ್ಲಿ ಆತನನ್ನು ಹುಡುಕಿ ಎಂದು ಬರೆಯಲಾಗಿದೆ. ರಾಡ್ನಿ ಎಂಬಾತನನ್ನು ಜೋಯಿ ಪ್ರೀತಿಸ್ತಾ ಇದ್ದಳು ಎನ್ನಲಾಗಿದೆ. ರಾಡ್ನಿ ಗಂಭೀರವಾಗಿ ಗಾಯಗೊಂಡಿದ್ದ ಜೋಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ.

ಯಾರೋ ಜೋಯಿಯನ್ನು ಹೊಡೆದಿದ್ದಾರೆ. ಈಕೆಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಿದ್ದ. ಆಸ್ಪತ್ರೆಗೆ ದಾಖಲಿಸಿದ ನಂತರ ಆತ ಪರಾರಿಯಾಗಿದ್ದಾನೆ. ಆತನ ಪತ್ತೆ ಸಾಧ್ಯವಾಗಿಲ್ಲ. ಜೋಯಿ ನೆನಪಲ್ಲಿ ಆಕೆಯ ಸ್ನೇಹಿತರು ಒಂದು ಫೇಸ್ಬುಕ್ ಪೇಜ್ ಓಪನ್ ಮಾಡಿದ್ದಾರೆ. ಅದ್ರಲ್ಲಿ ಈ ಫೋಟೋ ಹಾಗೂ ಸಂದೇಶ ಪೋಸ್ಟ್ ಆಗಿದೆ.

ಈ ಫೋಟೋ ನೋಡಿ ಅನೇಕರು ಕಂಗಾಲಾಗಿದ್ದಾರೆ. ಈ ಫೋಟೋ ನೋಡಿ ಕೆಲವರು ಆಶ್ಚರ್ಯಗೊಂಡಿದ್ದಾರೆ. ಮತ್ತೆ ಕೆಲವರು ಅಡ್ಮಿನ್ ಫೋಟೋ ಅಪ್ ಲೋಡ್ ಮಾಡಿರಬಹುದೆಂದು ಅಂದಾಜಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...