alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಲೆ ಮಾಡಿ ಶವದ ಜೊತೆ ಸೆಲ್ಫಿ ತೆಗೆದಿದ್ದವನಿಗೆ ಜೀವಾವಧಿ ಶಿಕ್ಷೆ

ಛತ್ತೀಸ್ಗಡದಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಪರಾಧಿ ಕೊಲೆ ಮಾಡಿದ್ದಲ್ಲದೆ ಶವದ ಜೊತೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದ. ಘಟನೆ ರಾಯಗಡದಲ್ಲಿ ನಡೆದಿತ್ತು.

2016ರಲ್ಲಿ ಜೀವನ್ ಯಾದವ್ ಎಂಬಾತ ಈ ಕೃತ್ಯವೆಸಗಿದ್ದ. ಮೇ.21ರ ಮಧ್ಯರಾತ್ರಿ ನಿಲೇಶ್ ಎಂಬಾತನ ಕಿರಣಿ ಅಂಗಡಿ ಬಾಗಿಲು ಒಡೆದು ಕಳ್ಳತನಕ್ಕೆ ಯತ್ನಿಸಿದ್ದ. ಈ ವೇಳೆ ನಿಲೇಶ್, ಯಾದವ್ ನನ್ನು ನೋಡಿದ್ದಾನೆ. ಸಿಕ್ಕಿಬಿದ್ದೆ ಎಂಬ ಭಯಕ್ಕೆ ನಿಲೇಶ್ ನನ್ನು ಯಾದವ್ ಕೊಲೆ ಮಾಡಿದ್ದ.

ಕೊಲೆ ಮಾಡಿದ ನಂತ್ರ ಯಾದವ್ ನಿಲೇಶ್ ಶವದ ಜೊತೆ ಸೆಲ್ಫಿ ತೆಗೆದು ತನ್ನ ಸ್ನೇಹಿತರಿಗೆ ಕಳುಹಿಸಿದ್ದ. ಅಲ್ಲದೆ ನಿಲೇಶ್ ಮನೆಯಲ್ಲಿಯೇ ಅಡಗಿಕೊಳ್ಳುವ ಪ್ರಯತ್ನ ನಡೆಸಿದ್ದ. ಫೋಟೋ ವೈರಲ್ ಆಗ್ತಿದ್ದಂತೆ ಪೊಲೀಸರು ಆರೋಪಿ ಯಾದವ್ ನನ್ನು ಬಂಧಿಸಿದ್ದರು. ಯಾದವ್ ಅಪರಾಧವನ್ನು ಒಪ್ಪಿಕೊಂಡಿದ್ದ. ವಿಚಾರಣೆ ನಂತ್ರ ಕೋರ್ಟ್ ಯಾದವ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...