alex Certify
ಕನ್ನಡ ದುನಿಯಾ       Mobile App
       

Kannada Duniya

ಇಬ್ಬರ ಸಾವಿಗೆ ಕಾರಣವಾಯ್ತು ಅಕ್ರಮ ಸಂಬಂಧ

crime 17 nm

ವ್ಯಾಪಾರಿಯೊಬ್ಬನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ, ತನ್ನ ಪತಿ ಸೇರಿದಂತೆ ಇಬ್ಬರನ್ನು ಕೊಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ನಡೆದಿದ್ದ, ಈ ಕೊಲೆ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಪಟ್ಟೆದೇವರಹಳ್ಳಿಯಲ್ಲಿ ಚುನಾವಣೆ ಸಂದರ್ಭದಲ್ಲಿ ಪಿ.ಎಸ್. ಸುರೇಶ್ ಮತ್ತು ಪಿ.ಬಿ.ಸುರೇಶ್ ಎಂಬುವವರು ಮದ್ಯ ಸೇವಿಸಿ ಮೃತಪಟ್ಟಿದ್ದರು. ಪಿ.ಎಸ್. ಸುರೇಶ್ ಪತ್ನಿ ಸುಜಾತ ಮತ್ತು ಅರಸೀಕೆರೆ ತಾಲ್ಲೂಕು ಯಾದಾಪುರದ ಶಿವಲಿಂಗಮೂರ್ತಿ ನಡುವೆ ಅಕ್ರಮ ಸಂಬಂಧ ಇದ್ದು, ಇದು ಪತಿ ಸುರೇಶ್ ಗೆ ಗೊತ್ತಾಗಿ ದಿನಾಲು ಮನೆಯಲ್ಲಿ ಜಗಳ ನಡೆಯುತ್ತಿತ್ತು. ಇದರಿಂದ ಪ್ರಿಯಕರನ ಜೊತೆ ಸೇರಿದ ಸುಜಾತ ಪತಿಯನ್ನು ಕೊಲ್ಲಲು ಪ್ಲಾನ್ ಮಾಡಿದ್ದಾಳೆ.

ಇಬ್ಬರು ಸೇರಿ ಮದ್ಯದ ಪೌಚ್ ನಲ್ಲಿ ವಿಷಬೆರೆಸಿ ಮನೆ ಬಾಗಿಲಲ್ಲಿ ಇಟ್ಟಿದ್ದರು. ಇದು ಯಾರೋ ಕಾರ್ಯಕರ್ತರು ಇಟ್ಟಿರುವ ಚುನಾವಣೆ ಮದ್ಯ ಎಂದು ಭಾವಿಸಿದ ಪಿ.ಎಸ್.ಸುರೇಶ್, ತನ್ನ ಸ್ನೇಹಿತ ಪಿ.ಬಿ.ಸುರೇಶ್ ಜೊತೆ ಸೇರಿ ಮದ್ಯ ಸೇವಿಸಿದ್ದು, ಇಬ್ಬರೂ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪಂಚನಹಳ್ಳಿ ಠಾಣೆ ಪೊಲೀಸರು, ತನಿಖೆ ನಡೆಸಿ, ಆರೋಪಿಗಳಾದ ಸುಜಾತ ಮತ್ತು ಆಕೆಯ ಪ್ರಿಯಕರ ಶಿವಲಿಂಗಮೂರ್ತಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...