alex Certify
ಕನ್ನಡ ದುನಿಯಾ       Mobile App
       

Kannada Duniya

ಅಳಿಯನೊಂದಿಗೆ ಅತ್ತೆ ಸರಸ,ನಂತರ ನಡೆಯಿತು ದುರಂತ

USA, New York State, New York City, Crime scene barrier tape

ಅಕ್ರಮ ಸಂಬಂಧಗಳು ಎಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗುತ್ತವೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ಅತ್ತೆಯೊಂದಿಗೇ ಅಕ್ರಮ ಸಂಬಂಧ ಹೊಂದಿದ್ದ ದುರುಳನೊಬ್ಬ, ತನ್ನ ಮಾವನನ್ನೇ ಕೊಲೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮಶೇಖರ ಎಂಬ ಸುಮಾರು 40 ವರ್ಷ ವಯಸ್ಸಿನ ವ್ಯಕ್ತಿ ಸಾವನ್ನಪ್ಪಿದ್ದು, ಅನುಮಾನಾಸ್ಪದ ಸಾವಿನ ಕಾರಣ ಆತನ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸ್ ತನಿಖೆಯಲ್ಲಿ ಸತ್ಯ ಬೆಳಕಿಗೆ ಬಂದಿದೆ. ಅದರಂತೆ, ಸೋಮಶೇಖರನ ತಂಗಿಯನ್ನು ಸುರೇಶ ಎಂಬುವನೊಂದಿಗೆ ಮದುವೆ ಮಾಡಲಾಗಿತ್ತು. ಪತ್ನಿ ತೀರಿದ ನಂತರ ಸುರೇಶ, ಸೋಮಶೇಖರನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ಸೋಮಶೇಖರ್ ಪತ್ನಿ ಗಂಡನ ಮಾತು ಮೀರಿ, ತನ್ನ ಮಗಳನ್ನು ಸುರೇಶನಿಗೆ ಕೊಟ್ಟು ಮದುವೆ ಮಾಡಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ಜಗಳ ನಡೆದಿದೆ. ಆಗ, ಸುರೇಶ ಬೆಂಗಳೂರಿನಿಂದ ತನ್ನ ಸ್ನೇಹಿತನನ್ನು ಕರೆಸಿಕೊಂಡು, ಕುತ್ತಿಗೆ ಬಿಗಿದು ಸೋಮಶೇಖರನನ್ನು ಕೊಲೆ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸೋಮಶೇಖರ್ ಪತ್ನಿ, ಅಳಿಯ ಸುರೇಶ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...